ಮೈಸೂರು

‘ಸ್ವರಾಮೃತ’ ಏಕ್ ಶಾಮ್ ರೆಹೆಮಾನ್‍ ಕೇ ನಾಮ್ : ಸಂಗೀತ ರಸಸಂಜೆ

ಆಸ್ಕರ್ ಪುರಸ್ಕೃತ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಸಂಯೋಜನೆ ಹಾಡುಗಳ ‘ಸ್ವರಾಮೃತ’ ‘ಏಕ್ ಶಾಮ್ ರೆಹೆಮಾನ್‍ ಕೇ ನಾಮ್ ಕಾರ್ಯಕ್ರಮವನ್ನು ಸ್ವರಸಾಗರ ಮ್ಯೂಜಿಕ್ ಫೌಂಡೇಶನ್‍ನಿಂದ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.

ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.11ರ ಸಂಜೆ 5.30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಿದ್ದು ಉದ್ಘಾಟನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಸಂಪಾದಕ ರಾಜಶೇಖರ ಕೋಟಿ, ರಂಗಾಯಣ ಮಾಜಿ ನಿರ್ದೇಶಕ ಹೆಚ್‍.ಜನಾರ್ದನ್, ಉದ್ಯಮಿ ಡಾ.ಜಗನಾಥ ಶೆಣೈ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ಅನೂಪ್ ಸೀಳನ್ ಭಾಗವಹಿಸುವರು ಎಂದರು.

ಎ.ಆರ್.ರೆಹಮಾನ್ ಸಂಗೀತವನ್ನು ವೇದಿಕೆಯ ಮೇಲೆ ಲೈವ್‍ ಆಗಿ ಪ್ರಸ್ತುತಪಡಿಸುವುದು ಕಷ್ಟ, ಆದರೆ ಕೇಳುಗನಿಗೆ ರಸದೌತಣ ನೀಡುವುದು ಅಂತಹ ಸಂಗೀತ ಸಂಜೆಯಲ್ಲಿ ಗಾಯಕರಾದ ಶುಭ ರಾಘವೇಂದ್ರ, ಚಿಂತನ್ ವಿಕಾಸ್, ಎಂ.ಆರ್. ಶ್ರೀಹರ್ಷ, ಅಶ್ವಿನ್ ಪ್ರಭು, ಶ್ರೇಯ ಭಟ್, ವಸುದಾ ಶಾಸ್ತ್ರೀ ಹಾಗೂ ಬೆಂಗಳೂರಿನ ಖ್ಯಾತ ಸಂಗೀತ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಸಂಸ್ಥೆ ಕಾರ್ಯದರ್ಶಿ ಶುಭ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Leave a Reply

comments

Related Articles

error: