ಮೈಸೂರು

ಕೃಷ್ಣರಾಜ ಕ್ಷೇತ್ರವನ್ನು ಬಾಡಿಗೆ ಮುಕ್ತ ಕ್ಷೇತ್ರ ಮಾಡುವ ಯೋಜನೆ ಕುರಿತು ಸಭೆ

ಮೈಸೂರು,ಜೂ.3:-  ಮೈಸೂರು ಮಹಾನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಕೃಷ್ಣರಾಜ ಕ್ಷೇತ್ರವನ್ನು ಬಾಡಿಗೆ ಮುಕ್ತ ಕ್ಷೇತ್ರ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡು ಆಶ್ರಯ ವಿಭಾಗಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಆಶ್ರಯ ಸಮಿತಿಯ ಅಧ್ಯಕ್ಷ  ಎಸ್ ಎ ರಾಮದಾಸ್  ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ನಗರ ಪಾಲಿಕೆಯ ಆಯುಕ್ತರು ಹಾಗೂ ಆಶ್ರಯ ಸಮಿತಿ ಕಾರ್ಯದರ್ಶಿಗಳಾದ ಶಿಲ್ಪನಾಗ್,ಉಪ ಆಯುಕ್ತರಾದ ಶಿವನಂದಾ ಮೂರ್ತಿ,ಪ್ರಭಾರ ಉಪ  ಆಯುಕ್ತ ಮಹೇಶ್, ಕಂದಾಯಾಧಿಕಾರಿಗಳಾದ ಕುಮಾರ್ ನಾಯಕ್,ಆಶ್ರಯ ವಿಭಾಗ ಆಧಿಕಾರಿಗಳಾದ ಸುನೀಲ್ ಬಾಬು,ಉಮೇಶ್, ಮಂಜುನಾಥ್, ಜ್ಯೋತಿ  ಈ ಎಲ್ಲಾ ಅಧಿಕಾರಿಗಳೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಪ್ರಮುಖ ನಿರ್ಣಯಗಳನ್ನು ಪ್ರಸ್ತಾಪಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: