ಕರ್ನಾಟಕ

ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಗೆ ನ್ಯಾಯ ಮೂರ್ತಿ ಶಿವಣ್ಣ ಸೂಚನೆ

ಹಾಸನ (ಜೂ.3): ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯನ್ನು ಇನ್ನಷ್ಟು ಅರ್ಥ ಪೂರ್ಣವಾಗಿ ಆಚರಿಸಲು ನಾಯ್ಯಾಂಗ ಇಲಾಖೆ ಯೋಜಿಸಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶಿವಣ್ಣ ಅವರು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಸಂಬಂಧ ನ್ಯಾಯಾಲಯ ಸಭಾಂಗಣದಲ್ಲಿ ಮೇ.30 ರಂದು ವಿಶೇಷ ಸಭೆ ನಡೆಸಿದ ನ್ಯಾಯಾಮೂರ್ತಿ ಶಿವಣ್ಣ ಅವರು ಈ ವರ್ಷ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಹೆಚ್ಚಿನ ಗಿಡ ನೆಟ್ಟು ಪೋಷಿಸೋಣ ಎಂದರು. ಜೂನ್ 5 ರಂದು ನಡೆಯಲಿರುವ ವಿಶ್ವ ಪರಿಸರ ದಿನಾಚರಣೆಯನ್ನು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶಿವಣ್ಣ ಅವರು ಎಲ್ಲಾ ಅಧಿಕಾರಿಗಳಿಗೆ ತಿಳಿಸಿದರು.

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಶಾಲಾ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು, ಸರ್ಕಾರಿ ಕಚೇರಿ ವ್ಯಾಪ್ತಿಯ ಕಾಂಪೌಂಡ್ ಒಳಗೆ ಖಾಲಿ ಇರುವ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ತೆಗೆದಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶಿವಣ್ಣ ಅವರು ತಿಳಿಸಿದರು.
ಸಸಿಗಳನ್ನು ನೆಟ್ಟು ಅವುಗಳನ್ನು ನೀರುಣಿಸಿ ಬೆಳೆಸುವುದರ ಜೊತೆಗೆ ದನ ಕರುಗಳು ನಾಶಮಾಡದಂತೆ ಸಂರಕ್ಷಿಸಿ ಬೆಳೆಸಲು ನಿಗಾವಹಿಸಬೇಕು ಎಂದ ಅವರು ಜಿಲ್ಲೆಯಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವ ಗುರಿಯಿದ್ದು ಎಲ್ಲಾ ಸರ್ಕಾರಿ ಕಚೇರಿಗಳ ಮುಖ್ಯಸ್ಥರು ತಮ್ಮ ಕಚೇರಿ ಆವರಣದಲ್ಲಿ ಅಂದಾಜು ಎಷ್ಟು ಗಿಡಗಳನ್ನು ನೆಡಬಹುದು ಎಂಬುದರ ಬಗ್ಗೆ ಪಟ್ಟಿ ನೀಡುವಂತೆ ಅವರು ಸೂಚಿಸಿದರು.

ಮಾನವನ ಅತಿಯಾದ ಆಸೆ ಹಾಗೂ ಅಭಿವೃದ್ದಿಯ ಹೆಸರಿನಲ್ಲಿ ಪರಿಸರವು ಅಳಿಯುವ ಅಂಚಿನೆಡೆ ಸಾಗುತ್ತಿದ್ದು ಪ್ರಾಣಿ- ಪಕ್ಷಿ ಸಂಕುಲಗಳು ಹಾಗೂ ಜಲ ಮೂಲಗಳು ನಶಿಸಿಹೋಗುತ್ತಿವೆ ಇನ್ನು ಮುಂದೆಯಾದರು ಜನರು ಪರಿಸರದ ಮೇಲೆ ಕಾಳಜಿ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದರು.

ಅಭಿವೃದ್ದಿ ಕೆಲಸಗಳಿಗಾಗಿ ಕಡಿದ ಮರ ಗಿಡಗಳಿಗೆ ಬದಲಾಗಿ 10 ಪಟ್ಟು ಹೆಚ್ಚಿನ ಗಿಡಗಳನ್ನು ನೆಡುವ ವ್ಯವಸ್ಥೆಯಾಗಬೇಕು, ಶಾಲೆಗಳಲ್ಲಿ ಗಿಡಗಳನ್ನು ನೆಟ್ಟು ಪೋರ್ಷಿಸಲು ಉತ್ತೇಜನ ನೀಡುವ ಮೂಲಕ ಮಕ್ಕಳಲ್ಲಿ ಹೆಚ್ಚಿನ ಪರಿಸರ ಕಾಳಜಿ ಹಾಗೂ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು ಎಂದು ಅವರು ಸೂಚಿಸಿದರಲ್ಲದೆ ಅತ್ಯಂತ ಮುತುವರ್ಜಿವಹಿಸಿ ಗಿಡಗಳನ್ನು ಬೆಳಸಿದ ಶಾಲೆಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಬೇಕು ಎಂದು ಶಿವಣ್ಣ ತಿಳಿಸಿದರು.

ಇದೇ ಸಂದರ್ಭಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಕೆ.ಎನ್ ವಿಜಯಪ್ರಕಾಶ್ ರವರು ಜಿಲ್ಲಾ ಪಂಚಾಯಿತಿ ಮೂಲಕ ವಿವಿಧ ಯೋಜನೆಗಳಡಿ ಹಮ್ಮಿಕೊಂಡಿರುವ ಜಲಾಮೃತ, ಜಲಮರುಪೂರಣ, ಜಲಬದ್ದತೆ, ಚೆಕ್‍ಡ್ಯಾಂಗಳ ನಿರ್ಮಾಣ ಹಾಗೂ ಇನ್ನಿತರ ಅನೇಕ ಯೋಜನೆಗಳಲ್ಲಿ ಪರಿಸರಕ್ಕೆ ಪೂರಕ ಕೆಲಸಗಳು ಜಿಲ್ಲೆಯಾದ್ಯಂತ ನಡೆಯುತ್ತಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸ್ವಚ್ಚತೆ ಹಸೀರಿಕರಣ, ಜಲ ಸಂರಕ್ಷಣೆ, ಕೆರಡಗಳ, ಕಟ್ಟಡಗಳ ಸಂರಕ್ಷಣೆ ಬಗ್ಗೆ ಹಸಿರು ಭೂಮಿ ಪ್ರತಿಷ್ಟಾನ ಹಾಗೂ ಮತ್ತಿತರ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕೆರೆಗಳ ಹಂಚಿನಲ್ಲಿ ಗಿಡಗಳನ್ನು ನೆಡುವುದರಿಂದ ಒತ್ತುವರಿಯನ್ನು ತಡೆಗಟ್ಟಬಹುದಾಗಿದೆ ಎಂದು ಡಾ. ಕೆ.ಎನ್. ವಿಜಯಪ್ರಕಾಶ್ ಅವರು ತಿಳಿಸಿದರು.

ನರೇಗಾ ಯೋಜನೆಯಡಿ ಒಂದು ಗಿಡ ನೆಟ್ಟು ರಕ್ಷಣೆ ಮಾಡಿದ್ದಲ್ಲಿ ಒಂದು ಸಸಿಗೆ 3 ವರ್ಷಕ್ಕೆ 100 ರೂಗಳನ್ನು ಸರ್ಕಾರದಿಂದ ನೀಡಲಾಗುವುದೆಂದು ತಿಳಿಸಿದ ಅವರು ಈಗಾಗಲೇ ನರೇಗಾ ಯೋಜನೆಯಡಿ ಗಿಡ ನೆಟ್ಟು ಪೋಷಿಸಲು ಕೃಷಿಕರು ಮುಂದಾಗಿದ್ದಾರೆ ಎಂದರು. ಜಲ ಸಂರಕ್ಷಣೆಗೆ ಪ್ರತಿ ಗ್ರಾಮ ಪಂಚಾಯಿತಿಗೆ 5 ಚೆಕ್ ಡ್ಯಾಂಗಳಂತೆ ಜಿಲ್ಲೆಯಲ್ಲಿ ಒಟ್ಟು 542 ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಡಾ. ಕೆ.ಎನ್. ವಿಜಯಪ್ರಕಶ್ ಅವರು ತಿಳಿಸಿದರು.

1ನೇ ಅಧಿಕ ಸತ್ರ ನ್ಯಾಯಾಧೀಶರಾದ ಎಸ್.ಆರ್. ಚನ್ನಕೇಶವ, ಹಿರಿಯ ಸಿವಿಲ್ ನ್ಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ ಸಿ.ಕೆ ಬಸವರಾಜು, ಅಪರ ಜಿಲ್ಲಾಧಿಕಾರಿಗಳಾದ ಎಂ.ಎಲ್ ವೈಶಾಲಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ನಂದಿನಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶಪ್ಪ, ಉಪವಿಭಾಗಾಧಿಕಾರಿಗಳಾದ ಡಾ. ಹೆಚ್.ಎಲ್ ನಾಗರಾಜ್, ವಕೀಲರ ಸಂಘದ ಅದ್ಯಕ್ಷರಾದ ಜೆ.ಪಿ ಶೇಖರ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್‍ನ ಜಿಲ್ಲಾ ಆಯುಕ್ತರಾದ ಡಾ. ವೈ.ಪಿ ವೀರಭದ್ರಪ್ಪ, ಗಿರಿಜಾಂಬಿಕ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ರಾಜ್ ಗೋಪಾಲ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: