ಕರ್ನಾಟಕ

ಹಾಸನ ಜಿಲ್ಲಾ ಆ್ಲಸ್ಪತ್ರೆಗೆ ಡಾ.ಶಂಕರ್ ಕೊಡುಗೆ ಅಪಾರ: ಡಾ. ರವಿಕುಮಾರ್

ಹಾಸನ (ಜೂ.3): ಜಿಲ್ಲಾ ಆ್ಲಸ್ಪತ್ರೆಗೆ ಡಾ.ಶಂಕರ್ ರವರ ಕೊಡುಗೆ ಅಪಾರ ಅವರು ಸರಳ ಸಜ್ಜನಿಕೆಗೆ ಹಾಗೂ ಹೃದಯ ವೈಶಲ್ಯತೆಗೆ ಹೆಸರುವಾಸಿಯಾಗಿದ್ದಾರೆ ಎಂದು ವೈದ್ಯಕೀಯ ಮಹಾವಿದ್ಯಾಲಯದ ನಿರ್ಧೇಶಕರಾದ ಡಾ.ರವಿಕುಮಾರ್ ತಿಳಿಸಿದ್ದಾರೆ.

ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಯೋನೀವೃತ್ತಿ ಹೊಂದಿದ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ವೈದ್ಯಕೀಯ ಅಧೀಕ್ಷರಾದ ಡಾ.ಶಂಕರ್ ರವರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ವೃತ್ತಿ ಜೀವನದಲ್ಲಿ ತಮ್ಮದೇಆದ ಚಾಪು ಮೂಡಿಸಿ ಸಂಸ್ಥೆಯು ಉತ್ತಮ ದರ್ಜೆಗೆ ಏರಲು ಡಾ.ಶಂಕರ್ ರವರ ಕೊಡುಗೆ ಬಹುದೊಡ್ಡದು ಎಂದರು.

ಈ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಕಾರ್ಯನಿರ್ವಹಿಸಿದ ಅವರು ತಮ್ಮ ಜವಬ್ಧಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಇತರ ವೈದ್ಯಾಧಿಕಾರಿಗಳಿಗೂ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ತಮ್ಮ ಕಾರ್ಯ ನಿಷ್ಠೆ ಹಾಗೂ ಕಾರ್ಯ ವೈಖರಿಗಳಿಂದಲೇ ಗುರುತಿಸಿಕೊಂಡಿರುವ ಡಾ.ಶಂಕರ್ ರವರು ಜಿಲ್ಲೆಯ ಪ್ರಖ್ಯಾತ ವೈದ್ಯರು ಎಂದು ಖ್ಯಾತಿ ಪಡೆದಿದ್ದು ಇಂತಹ ವೈದ್ಯಾಧಿಕಾರಿಗಳನ್ನು ನಮ್ಮ ಸಂಸ್ಥೆ ಸದಾ ನೆನಪಿಸಿಕೊಳ್ಳುತ್ತದೆ ಎಂದರಲ್ಲದೆ ಒಬ್ಬ ವೈದ್ಯನಿಗಿರಬೇಕಾದ ಶಾಂತ ಸ್ವರೂಪದ ಮನೋಭಾವನೆಯನ್ನು ಹಾಗೂ ಅವರಿಗಿದ್ದ ರೋಗಿಗಳ ಜೊತೆಗಿನ ಒಡನಾಟವನ್ನು ಎಲ್ಲರೂ ರೂಡಿಸಿಕೊಳ್ಳೋಣ ಎಂದು ಸ್ಮರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮೇ.31 ರಂದು ಜನಿಸಿದ್ದ ಸಂಸ್ಥೆಯ ಬೋದಕ ಮತ್ತು ಬೋದಕೇತರ ಸಿಬ್ಬಂದಿಗಳಿಗೆ ಸಾಂಕೇತಿಕವಾಗಿ ಹುಟ್ಟುಹಬ್ಬ ಆಚರಿಸಲಾಯಿತು ಹಾಗೂ ಅದೇ ವರ್ಷ ಸಂಸ್ಥೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಂಕರ್ ರವರು ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯ ಆಡಳಿತ ಅಧಿಕಾರಿಗಳಾದ ಡಾ.ಕಲ್ಪಶ್ರೀ, ಹಣಕಾಸು ಅಧಿಕಾರಿ ಹಾಗೂ ನೂತನ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ, ಪ್ರಬಾರ ವೈದ್ಯಕೀಯ ಅಧೀಕ್ಷರಾದ ಡಾ.ಶ್ರೀನಿವಾಸ್‍ಗೌಡ, ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ.ಪ್ರಕಾಶ್‍ರಾಜ್, ಶುಶ್ರೂಷಕ ಅಧೀಕ್ಷಕರಾದ ನಾಗಮ್ಮ ಹಾಗೂ ಮತ್ತಿತರ ವೈದ್ಯಾಧಿಕಾರಿಗಳು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: