ಲೈಫ್ & ಸ್ಟೈಲ್

ನೆನಪಿರಲಿ, ನಾಲಿಗೆ ಶುಚಿ ಮಾಡದಿದ್ದರೆ ಅಪಾಯ ನಿಶ್ಚಿತ!

ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲ, ಶರೀರದ ಆರೋಗ್ಯಕ್ಕೂ ನಾಲಿಗೆಯನ್ನು ಸ್ವಚ್ಛಗೊಳಿಸಿವುದು ಅತ್ಯವಶ್ಯಕ. ದಿನನಿತ್ಯ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸವಿದ್ದರೂ, ಕೆಲವರು ನಾಲಿಗೆ ಸ್ವಚ್ಛಗೊಳಿಸುವಿಕೆಯನ್ನು ಕಡೆಗಣಿಸುತ್ತಾರೆ. ಸಾಮಾನ್ಯವಾಗಿ ನಾಲಿಗೆಯನ್ನು ಕ್ಲೀನ್ ಮಾಡದಿದ್ದರೆ ತೆಳುವಾದ ಬಿಳಿ ಪದರವು ಮೂಡಿರುತ್ತದೆ. ಇಂತಹ ಪದರವೇ ಮುಂದೆ ಅಪಾಯಕಾರಿಯಾಗಲಿದೆ ಎಂದರೆ ನಂಬಲೇಬೇಕು. ಒಂದು ವೇಳೆ ನೀವು ನಾಲಿಗೆ ಸ್ವಚ್ಛ ಮಾಡದಿದ್ದರೆ ಉಂಟಾಗುವ ಸಮಸ್ಯೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾಯಿಯಲ್ಲಿ ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿರುತ್ತವೆ. ಅದರಲ್ಲೂ ನಿದ್ದೆಯ ಸಮಯದಲ್ಲಿ ಬಾಯಿಯಲ್ಲಿ ಸುಮಾರು 700ಕ್ಕೂ ಹೆಚ್ಚಿನ ಬ್ಯಾಕ್ಟೀರಿಯಾಗಳು ಕಂಡು ಬರುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಬೆಳಿಗ್ಗೆ ಎದ್ದು ಬ್ರಶ್ ಮಾಡಿದ ಬಳಿಕ ಇಂತಹ ಬ್ಯಾಕ್ಟೀರಿಯಾಗಳು ಕಡಿಮೆಯಾದರೂ, ನಾಲಿಗೆಯನ್ನು ಕ್ಲೀನ್ ಮಾಡಿದಿದ್ದರೆ ಅವುಗಳಲ್ಲಿ ಹೆಚ್ಚಿನವು ಹಾಗೆಯೇ ಉಳಿದು ಬಿಡುತ್ತವೆ. ಇದರಿಂದ ನಾಲಿಗೆ ಮೇಲೆ ಬೊಬ್ಬೆ ಏಳುವುದು, ನಾಲಿಗೆ ಸೀಳು, ಅಜೀರ್ಣ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳು ಕಾಣಿಸುತ್ತವೆ.

ನಾಲಿಗೆಯನ್ನು ಕ್ಲೀನ್ ಮಾಡದೇ, ನಾವೆಷ್ಟು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ಗಂಧ ಹಾಗೇ ಉಳಿದು ಬಿಡುತ್ತದೆ. ಇದರಿಂದ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆಗೆ ನಾಲಿಗೆಯನ್ನು ಸ್ವಚ್ಛ ಮಾಡದಿರುವುದೇ ಒಂದು ಕಾರಣ. ನೀವು ತೋರುವ ಸಣ್ಣ ಅಸಡ್ಡೆಯೇ ಮುಂದೆ ಜನರ ಮಧ್ಯೆ ಮುಜುಗರವನ್ನುಂಟು ಮಾಡಬಹುದು.

ನಾಲಿಗೆಯನ್ನು ಸ್ವಚ್ಛ ಮಾಡದಿರುವುದರಿಂದ ಕೇವಲ ಬಾಯಿ ದುರ್ಗಂಧ ಮಾತ್ರ ಹೊರ ಬರುವುದಿಲ್ಲ. ಬದಲಾಗಿ ನಾವು ಉಸಿರಾಡುವಾಗಲು ಕೆಟ್ಟ ವಾಸನೆಯೊಂದು ಬರುತ್ತಿರುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರೆದರೆ ಅನಾರೋಗ್ಯಕ್ಕೂ ಕಾರಣವಾಗಬಹುದು.

ನಾಲಿಗೆ ಮೇಲೆ ಬ್ಯಾಕ್ಟೀರಿಯಾಗಳು ಹೆಚ್ಚಾದಂತೆ ಅದು ಹಲ್ಲುಗಳಿಗೆ ಹರುಡುತ್ತವೆ. ಇದರಿಂದ ನೀವು ಹಲ್ಲುಜ್ಜಿ ಕೂಡ ಪ್ರಯೋಜನ ಇಲ್ಲದಂತಾಗುತ್ತದೆ. ಏಕೆಂದರೆ ಬ್ಯಾಕ್ಟೀರಿಯಾಗಳು ಹಲ್ಲುಗಳಿಗೆ ಪಸರಿಸುವುದರಿಂದ ಹಲ್ಲುಗಳು ಕೆಡುತ್ತದೆ. ಇದುವೇ ಮುಂದೆ ಹಲ್ಲು ನೋವು ಸೇರಿದಂತೆ ಮುಂತಾದ ಸಮಸ್ಯೆಗಳನ್ನು ಉಂಟು ಮಾಡುತ್ತವೆ.

ದಿನನಿತ್ಯ ನಾಲಿಗೆಯನ್ನು ಕ್ಲೀನ್​ ಮಾಡಿದ್ದರೆ, ಅದು ಒಸಡುಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಒಸಡುಗಳು ಊತಗೊಳ್ಳಲು ಮತ್ತು ಅತೀ ಕೆಂಪು ಬಣ್ಣಕ್ಕೆ ತಿರುಗಳು ನಾಲಿಗೆ ಮೇಲಿನ ಬ್ಯಾಕ್ಟೀರಿಯಾಗಳು ಕಾರಣವಾಗಿರುತ್ತವೆ. ಇದರಿಂದ ಮುಂದೆ ಒಸಡಿನ ಸಮಸ್ಯೆ ಸೇರಿದಂತೆ ಹಲವು ಸೋಂಕುಗಳು ಕಾಣಿಸುತ್ತವೆ.

ನೀವು ದೀರ್ಘಕಾಲದವರೆಗೆ ನಾಲಿಗೆಯನ್ನು ಸ್ವಚ್ಛಗೊಳಿಸದೇ ನಿರ್ಲಕ್ಷ್ಯವಹಿಸಿದರೆ ಅದು ಹಲ್ಲುಗಳ ಮತ್ತು ಒಸಡುಗಳ ಮೇಲೆ ಉಂಟಾಗುವ ಉರಿಯೂತಕ್ಕೆ ಕಾರಣವಾಗುತ್ತವೆ. ಇದುವೇ ಮುಂದೆ ಹೃದಯಾಘಾತ, ಪಾರ್ಶ್ವವಾಯು, ಗರ್ಭಪಾತದ ಅಪಾಯಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ದಿನನಿತ್ಯ ನೀವು ತೋರುವ ಉದಾಸೀನತೆ ಮುಂದೆ ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು! (ಎನ್.ಬಿ)

Leave a Reply

comments

Related Articles

error: