ಮೈಸೂರು

ಒತ್ತಡವನ್ನು ಅರಿತು ನಡೆದಲ್ಲಿ ಸಾಧನೆ ಸುಲಭ : ಡಾ.ಕೆ.ರಾಘವೇಂದ್ರ ಪೈ

ಒತ್ತಡವನ್ನು ಅರಿತು ನಡೆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಮೈಸೂರು ವಿಶ್ವವಿದ್ಯಾನಿಲಯ ಶ್ರೀ ವಿವೇಕಾನಂದ ಪೀಠ ವಿಶ್ರಾಂತ ಸಂದರ್ಶನ ಪ್ರಾಧ್ಯಾಪಕ ಡಾ.ಕೆ.ರಾಘವೇಂದ್ರ ಪೈ  ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಯುಜಿಸಿ- ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಂಶೋಧನಾ ವಿದ್ಯಾರ್ಥಿಗಗಳಿಗೆ ಒತ್ತಡ ನಿರ್ವಹಣೆ ಕುರಿತು ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಏನನ್ನಾದರೂ ಸಾಧಿಸಲು ಒತ್ತಡದ ಬದುಕು ಇರಬೇಕು. ಆದರೆ ಅದನ್ನು ನಿರ್ವಹಿಸುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು

ಯುಜಿಸಿ- ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ನಿರ್ದೇಶಕಿ ಪ್ರೊ.ಮಿಡತಲ ರಾಣಿ ಮಾತನಾಡಿ, ಆಧುನಿಕ  ಯುಗದಲ್ಲಿ ಎಲ್ಲರೂ ಒತ್ತಡದಿಂದ ಬದುಕುತ್ತಿದ್ದು, ಯೋಗದ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು ಎಂದರು.

ಈ ಸಂದರ್ಭ  ಮೈಸೂರು ವಿವಿಯ ವಿವಿಧ ವಿಭಾಗದ ಸಂಶೋಧನ ವಿದ್ಯಾರ್ಥಿಗಳು ಹಾಗೂ ಸಂಯೋಜಕ ಡಾ.ಎಲ್.ನಂಜುಂಡಸ್ವಾಮಿ ಹಾಜರಿದ್ದರು.

Leave a Reply

comments

Related Articles

error: