ಮೈಸೂರು

ಅಕ್ರಮ ಮರಳು ಸಾಗಾಣೆ ವಾಹನ ವಶ

ಮೈಸೂರು ಜಿಲ್ಲಾ ಅಪರಾಧ ದಳ ಯಶಸ್ವಿ  ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ಅಕ್ರಮವಾಗಿ  ಮರಳು ಸಾಗಾಣೆ ನಡೆಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದೆ.

ಮೈಸೂರು ಜಿಲ್ಲೆಯ ಕೆ.ಆರ್.ತಾಲೂಕಿನ ಗ್ರಾಮಗಳಾದ ಕಗ್ಗೆರೆ, ಹಳೇ ಎಡತೊರೆ, ದೊಡ್ಡಕೊಪ್ಪಲು ಗ್ರಾಮದ ಬಳಿ ಅಕ್ರಮ ಮರಳು ಸಾಗಾಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ವಾಹನ ಚಾಲಕರು ಸೇರಿದಂತೆ  5 ಜನರನ್ನು  ವಶಕ್ಕೆ ಪಡೆದಿದ್ದಾರೆ. ಅವರನ್ನು ಈಶ್ವರ,ಅನಂದ, ದಿನೇಶ, ರಾಮಚಂದ್ರ ಮತ್ತು ಅವಿನಾಶ್  ಎಂದು ಗುರುತಿಸಲಾಗಿದೆ.
ಜಿಲ್ಲಾ ಅಪರಾಧ ದಳದ ವೃತ್ತ ನಿರೀಕ್ಷಕ ಗೋಪಾಲಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕೆ.ಆರ್.ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: