ಪ್ರಮುಖ ಸುದ್ದಿಮೈಸೂರು

ಬಿಎಐ ನಿಂದ ಪರಿಸರ ದಿನಾಚರಣೆ ಅಂಗವಾಗಿ ‘ಪರಿಸರ ಮಾಸಾಚರಣೆ’ : ವಿವಿಧ ವಿಶೇಷ ಕಾರ್ಯಕ್ರಮ

ಮೈಸೂರು.ಜೂ.3 : ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಇವರ ವತಿಯಿಂದ ಮೈಸೂರು ಕೇಂದ್ರ ಹಾಗೂ ಮೈಸೂರು  ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಜೂನ್ ತಿಂಗಳು ಪೂರ್ತಿ ಪರಿಸರ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಜೆ.ವಿ.ಆರ್.ನೈಧ್ರುವರವರು ತಿಳಿಸಿದರು.

ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ‌ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‌ಅವರು, ಜೂನ್ ತಿಂಗಳಲ್ಲಿ ಪರಿಸರ ಮಾಸಾಚರಣೆಯನ್ನು ಹಮ್ಮಿಕೊಂಡಿದ್ದು  ಜೂನ್ 5 ರಂದು ಸಂಜೆ 7 ಗಂಟೆಗೆ ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ , ಅಂದು ಮುಖ್ಯ ‌ಅತಿಥಿಗಳಾಗಿ ಬೆಂಗಳೂರಿನಲ್ಲಿ ಕೆರೆ ಪುನರುಜ್ಜೀವನಗೊಳಿಸಿದ ಆನಂದ್ ಮಲ್ಲಿಗಾವಡ್ ಅವರು ಆಗಮಿಸಲಿದ್ದಾರೆ ,

ಜೂನ್ 9 ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಬೆಳಗ್ಗೆ 6 ಗಂಡೆಗೆ ಬಿ ಎಐ ಬ್ಲೂ ಸ್ಯಾಂಡ್ ಗ್ರೀನ್ ಮ್ಯಾರಥಾನ್ ಅನ್ನು ಏರ್ಪಡಿಸಲಾಗಿದೆ ,

10  ಕಿಮೀ  ಗೆ ರೂ 350  ಶುಲ್ಕ , 5 ಕಿ ಮೀ ಗೆ 250ರೂ ಶುಲ್ಕ ವಿರುತ್ತದೆ,  ಜೂನ್ 12 ರಂದು ಮೈಸೂರಿನ ಸುತ್ತಮುತ್ತ ಹಲವು ಬಡಾವಣೆಗಳಲ್ಲಿ ಬೃಹತ್ತಾಗಿ ಗಿಡ ನೆಡುವ ಕಾರ್ಯಕ್ರಮವನ್ನು ‌ಹಮ್ಮಿಕೊಳ್ಳಲಾಗಿದೆ , ಜೂನ್ 16 ರಂದು ಬೆಳಗ್ಗೆ 10 ಗಂಟೆಗೆ ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಚಿತ್ರ ಬಿಡಿಸುವ ಮತ್ತು ಬಣ್ಣ ಹಚ್ಚುವ ಸ್ಪರ್ಧೆ, ಜೂನ್ 16 ರಂದು ಗೃಹಿಣಿಯರಿಗೆ ಅಡುಗೆ ಮನೆ ಹಾಗೂ ಮನೆಯಲ್ಲಿ ಪರಿಸರ ಸ್ನೇಹಿ ಗೃಹ ಬಳಕೆ ಸಾಮಾಗ್ರಿಗಳ ಉಪಯೋಗದ ಬಗ್ಗೆ ಮಾಹಿತಿ ಕಾರ್ಯಗಾರ , ಜೂನ್ 23 ರಂದು ಹಸಿರು ಸಂಪತ್ತು ಅನ್ವೇಷಣೆ ಕಾರ್ಯಕ್ರಮ, ಜೂನ್ 30 ರಂದು ಮಡಿಕೆರಿಯಲ್ಲಿರುವ ಕೋಟೆಬೆಟ್ಟ ಎಂಬಲ್ಲಿ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೃಷ್ಣ , ರತ್ನರಾಜ್ ರಘುನಾಥ್ , ನೈದೃವ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: