ಮೈಸೂರು

ಫೆ.9 : ತಾಂತ್ರಿಕ ಕೌಶಲ್ಯ ತರಬೇತಿ ಕಾರ್ಯಾಗಾರ

ಕರ್ನಾಟಕ ರಾಜ್ಯ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಅಸೋಸಿಯೇಷನ್ ಪ್ರಥಮ ವಾರ್ಷಿಕೋತ್ಸವದಂಗವಾಗಿ ಬೋಧಕ ಸಿಬ್ಬಂದಿಗಾಗಿ ‘ತಾಂತ್ರಿಕ ಕೌಶಲ್ಯ’ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ಸಿದ್ದರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿಂದು ಮಾತನಾಡಿ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಅಸೋಸಿಯೇಷನ್ ಹಾಗೂ ಸೆಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಜಂಟಿಯಾಗಿ ಫೆ.9ರ ಗುರುವಾರ ಬೆಳಿಗ್ಗೆ 10ಕ್ಕೆ ಸೈಂಟ್‍ ಜೋಸೆಫ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಹಾಪೌರ ಎಂ.ಜೆ.ರವಿಕುಮಾರ್ ಉದ್ಘಾಟಿಸುವರು. ಕಾರ್ಯಾಗಾರದಲ್ಲಿ ಮೈಸೂರು ವಿವಿಯ ಉಪಕುಲಪತಿ ಪ್ರೊ.ಯಶವಂತ್ ಡೋಂಗ್ರೆ, ವಿಶ್ರಾಂತ ಉಪಕುಲಪತಿ ಪ್ರೊ. ಕೆ.ಚಿದಾನಂದ ಗೌಡ, ಪ್ರಮಥಿ ಹಿಲ್ ವ್ಯೂ ಅಕಾಡೆಮಿ ಕಾರ್ಯದರ್ಶಿ ಹೆಚ್.ವಿ.ರಾಜೀವ್, ಮೈ.ವಿವಿ ಕಂಪ್ಯೂಟರ್ ವಿಭಾಗದ ಡಾ.ಪಿ.ನಾಗಭೂಷಣ್ ಉಪಸ್ಥಿತರಿರುವರು. ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ.ಎಂ.ಮಣಿ ಅಧ್ಯಕ್ಷತೆ ವಹಿಸುವರು ಎಂದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮೈ.ವಿವಿ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಕಂಪ್ಯೂಟರ್ ವಿಭಾಗದ ಡಾ.ಜಿ.ಹೇಮಂತ್ ಕುಮಾರ್, ಸೈಂಟ್ ಜೋಸೆಫ್ ಕಾಲೇಜಿನ ಡಾ.ಶ್ರೀಕಾಂತ್ ಸ್ವಾಮಿ ಎಸ್ ಹಾಗೂ ಇತರರು ಉಪಸ್ಥಿತರಿರುವರು ಎಂದರು.

ಕಳೆದೊಂದು ವರ್ಷದಿಂದ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಲವಾರು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಲೇಖನಗಳನ್ನು ವಿತರಿಸಲಾಗಿದೆ. ಅದರಂತೆ ಉಪನ್ಯಾಸಕರ ಅರ್ಹತಾ ಪರೀಕ್ಷೆಗಳಾದ ಯುಜಿಸಿ, ಎನ್ಇಟಿ/ ಕೆ-ಸೆಟ್ / ಗೇಟ್ ಗಳಿಗೆ ಉಪನ್ಯಾಸ ತರಗತಿಗಳನ್ನು ನಡೆಸಲಾಗಿದೆ ಎಂದು ಸಂಕ್ಷಿಪ್ತ ವಾರ್ಷಿಕ ವರದಿಯನ್ನು ಮುಂದಿಟ್ಟರು.

ಕಾರ್ಯದರ್ಶಿ ಪ್ರೊ.ಜಗದೀಶ್ ಕೃಷ್ಣ, ಸೈಂಟ್ ಜೋಸೆಫ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಅನಿಷಾ ಕುಮಾರ್ ಹಾಗೂ ಜಂಟಿ ಕಾರ್ಯದರ್ಶಿ ಪ್ರೊ.ಸಂತೋಷ್‍ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: