ಮೈಸೂರು

ಪೊಲೀಸರ ನಿರ್ಲಕ್ಷ್ಯ : ಪ್ರಕರಣ ಮುಚ್ಚಿ ಹಾಕುವ ಹುನ್ನಾರ

ಹೆಗ್ಗಡದೇವನ ಕೋಟೆ ಪೊಲೀಸರು ಗ್ರಾಮೀಣ ಜನರ ದೂರನ್ನು ದಾಖಲಿಸದೇ ನಿರ್ಲಕ್ಷ್ಯಿಸಿ ಅಪರಾಧ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ ಎಂದು ಪೊಲೀಸರ ಕ್ರಮವನ್ನು ಕಟುವಾಗಿ ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಎನ್.ನಂಜೇಗೌಡ ನೇರವಾಗಿ ಆರೋಪಿಸಿದ್ದಾರೆ.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪೊಲೀಸರು ಪ್ರಕರಣಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚಿಹಾಕುವುದು ಸುಪ್ರೀಂ ಕೋರ್ಟ್‍ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಸಂಬಂಧಿಸಿದ ಹಿರಿಯ ಅಧಿಕಾರಿಗಳು ತಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಾರಾಂಶ : ಕುಣಿಗಲ್ ತಾಲೂಕಿನ ರಾಜು ಎಂಬುವರು ಕಳೆದ ವರ್ಷ ಆಗಸ್ಟ್ 21ರಂದು ತಮಗೆ ಸೇರಿದ್ದ ಕೃಷಿ ಉಪಕರಣಗಳು ಕಳುವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರೇ ಹೊರತು ಇದುವರೆಗೂ ಎಫ್‍ಐಆರ್‍ ದಾಖಲಿಸಿಲ್ಲ ಹಾಗೂ ಆಪಾದಿತನ ಬಗ್ಗೆ ಸುಳಿವು ನೀಡಿದ್ದರೂ ಆತನನ್ನು ತನಿಖೆ ಮಾಡಿಲ್ಲ.  ಈ ಬಗ್ಗೆ ಎಸ್ಪಿ ರವಿ ಚನ್ನಣ್ಣನವರು ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಕೂಡ ಇದುವರೆಗೂ ಯಾವ ಕಾನೂನು ಕ್ರಮ ಜರುಗಿಸದೇ ಅರೋಪಿಗಳೊಂದಿಗೆ ಸ್ಥಳೀಯ ಪೊಲೀಸರು ಶಾಮೀಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪೊಲೀಸರ ವಿರುದ್ಧವೇ ಖಾಸಗಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ಪಿರ್ಯಾದಿ ರಾಜು, ಸೋಮಯ್ಯ, ಮಂಡ್ಯ ಜಿಲ್ಲಾ ರೈತ ಸಂಘದ ಸಂಚಾಲಕ ಕಿರಂಗೂರು ಪಾಪು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: