ಮೈಸೂರು

ಅತಿಯಾದ ಮದ್ಯ ಸೇವಿಸಿ ವ್ಯಕ್ತಿ ಸಾವು

ಮೈಸೂರು,ಜೂ.4:- ಅತಿಯಾಗಿ ಮದ್ಯ ಸೇವಿಸಿದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಶ್ರೀರಾಂಪುರ ಜಂಕ್ಷನ್ ಬಳಿ ನಡೆದಿದೆ.

ಮೃತರನ್ನು ಕಬ್ಬಳ್ಳಿ ಗ್ರಾಮದ ನಿವಾಸಿ ಸ್ವಾಮಿ(45)ಎಂದು ಗುರುತಿಸಲಾಗಿದೆ. ಇವರು ಅವಿವಾಹಿತರಾಗಿದ್ದು, ತಂದೆ-ತಾಯಿ ಇರಲಿಲ್ಲ. ಸರಿಯಾಗಿ ಮನೆಗೂ ಹೋಗುತ್ತಿರಲಿಲ್ಲ. ರಿಕ್ಷಾ ನಿಲ್ದಾಣದಲ್ಲಿಯೇ ಮಲಗುತ್ತಿದ್ದರು. ಅತಿಯಾಗಿ ಮದ್ಯ ಸೇವಿಸಿದ್ದರಿಂದ ಇವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿದ್ಯಾರಣ್ಯ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: