ಸುದ್ದಿ ಸಂಕ್ಷಿಪ್ತ

ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ, ತೆರೆದ ಬಾವಿ ಸೌಲಭ್ಯ ಪಡೆಯಲು ಅರ್ಜಿ

ಮಂಡ್ಯ (ಜೂ.4): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಿಂದ 2019-20ನೇ ಸಾಲಿನಲ್ಲಿ ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ, ಪ್ರೇರಣಾ (ಮೈಕ್ರೊ ಕ್ರೆಡಿಟ್ ಯೋಜನೆ) ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ ಮತ್ತು ತೆರೆದ ಬಾವಿ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ಹಾಗೂ ಇದುವರೆಗೂ ನಿಗಮದಿಂದ ಯಾವುದೇ ಸೌಲಭ್ಯ ಪಡೆಯದ ಪರಿಶಿಷ್ಟ ವರ್ಗಕ್ಕೆ ಸೇರಿದ 18 ರಿಂದ 60 ವರ್ಷ ವಯಸ್ಸಿನವರಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹಿಂದೆ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದೇ ಇದ್ದಲ್ಲಿ ಅಂತವರು ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಅರ್ಜಿಯನ್ನು ದಿನಾಂಕ:01-06-2019 ರಿಂದ ವಿತರಿಸಲಾಗುವುದು. ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31-07-2019 ಆಗಿರುತ್ತದೆ. ಅರ್ಜಿಗಳನ್ನು ಜಿಲ್ಲಾ ಕಛೇರಿಯಲ್ಲಿ ಅಥವಾ ಆಯಾ ತಾಲ್ಲೂಕಿನ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಮುಖಾಂತರ ಉಚಿತವಾಗಿ ಪಡೆಯಬಹುದು.

ಅರ್ಜಿ ಜೊತೆ ಭಾವಚಿತ್ರ, ಜೀವಿತ ಅವಧಿಯ ಜಾತಿ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ, ಆಹಾರ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಉಳಿತಾಯ ಖಾತೆಯ ಪ್ರತಿ, ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಕನಿಷ್ಠ 1.20 ಎಕರೆ ಯಿಂದ 5.00 ಎಕರೆ ಖುಷ್ಕಿ ಜಮೀನನ್ನು ಹೊಂದಿದಂತಹ ಸಣ್ಣ ಹಾಗೂ ಅತೀಸಣ್ಣ ರೈತರುಗಳು ಪಹಣಿ ಮತ್ತು ಸಣ್ಣ ಹಿಡುವಳಿದಾರರ ಪತ್ರ ಲಗತ್ತಿಸಬೇಕು. ಉದ್ಯಮ ಶೀಲತಾ ಯೋಜನೆಯಡಿ ಅರ್ಜಿ ಸಲ್ಲಿಸುವವರು ಯೋಜನಾ ವರದಿಗಳನ್ನು ಕಡ್ಡಾಯವಾಗಿ ಲಗತ್ತಿಸುವುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ, ಮಂಡ್ಯ ಜಿಲ್ಲೆ — ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08232-221157 ಮುಖಾಂತರ ಸಂಪರ್ಕಿಸಲು ತಿಳಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: