
ಪ್ರಮುಖ ಸುದ್ದಿವಿದೇಶ
ವಿಶ್ವದಲ್ಲಿ ಇದೇ ಮೊದಲು ಪೊಲೀಸ್ ಗಸ್ತಿಗೆ ಬಳಸಲಾಗುತ್ತಿದೆ ಇಲೆಕ್ಟ್ರಿಕ್ ಕಾರ್ : ಕಾರಿನ ಬೆಲೆ ಬರೋಬ್ಬರಿ 88ಲಕ್ಷರೂ.
ವಿದೇಶ(ಸಿಡ್ನಿ)ಜೂ.4:- ಆಸ್ಟ್ರೇಲಿಯಾದ ವಿಕ್ರೋರಿಯಾ ಪ್ರದೇಶದ ಪೊಲೀಸರು ಇಲೆಕ್ಟ್ರಿಕ್ ಕಾರ್ ನಲ್ಲಿ ಗಸ್ತು ನಡೆಸುವುದು ಕಂಡು ಬರಲಿದೆ.
ವಿಕ್ಟೋರಿಯಾ ಪೊಲೀಸರಿಗೆ ನಿನ್ನೆ ಮೊದಲ ಇಲೆಕ್ಟ್ರಿಕ್ ಕಾರ್ ‘ ಟೆಸ್ಲಾ ಮಾಡಲ್ ಎಕ್ಸ್’ ನ್ನು ಒದಗಿಸಲಾಗಿದೆ.ಇದರ ಜೊತೆ ವಿಕ್ಟೋರಿಯಾ ಪೊಲೀಸರು ಗಸ್ತಿಗೆ ಇಲೆಕ್ಟ್ರಿಕ್ ಕಾರನ್ನು ಬಳಸುವ ವಿಶ್ವದ ಮೊದಲ ಪೊಲೀಸರೆಂದು ಗುರುತಿಸಿಕೊಳ್ಳಲಿದ್ದಾರೆ. ಈ ಕಾರಿನ ಬೆಲೆ ಒಂದು ಲಕ್ಷದ ಇಪ್ಪತ್ತೇಳು ಸಾವಿರದ ಇನ್ನೂರು ಡಾಲರ್, ಸುಮಾರು 88ಲಕ್ಷದ 16ಸಾವಿರದ 868ರೂ.ಗಳು. 100ಕಿ.ಮೀ.ಪ್ರತಿಗಂಟೆಗೆ ಚಲಿಸಲಿದೆ. ಹೆದ್ದಾರಿ ಪೆಟ್ರೋಲ್ ಇನ್ಸಪೆಕ್ಟರ್ ಸ್ಟುಅರ್ಟ್ 2019ರ ವೇಳೆಗೆ ಪ್ರತಿ ರಾಜ್ಯದ ಪೊಲೀಸ್ ಫೋರ್ಸ್ ಇಲೆಕ್ಟ್ರಿಕ್ ಕಾರ್ ಬಳಸಲಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ. (ಎಸ್.ಎಚ್)