ಮೈಸೂರು

ಅಡ್ಡಾದಿಡ್ಡಿ ವಾಹನ ಓಡಿಸಿ ಪ್ರಾಣ ಕಳೆದುಕೊಳ್ಳಬೇಡಿ : ಸತೀಶ್ ಸಲಹೆ

ಅಪ್ರಾಪ್ತ ವಯಸ್ಕ ಮಕ್ಕಳಿರುವುದು ಚೆನ್ನಾಗಿ ಓದಿ ಪ್ರತಿಭಾವಂತರಾಗೋದಕ್ಕೆ ವಿನಃ ಅಡ್ಡಾದಿಡ್ಡಿ ವಾಹನ ಓಡಿಸಿ ಪ್ರಾಣ ಕಳೆದುಕೊಳ್ಳೋದಿಕ್ಕಲ್ಲ ಎಂದು ಪಶ್ಚಿಮ ವಲಯದ ಪ್ರಾದೇಶಿಕ ಸಾರಿಗೆ ಕಚೇ ಹಿರಿಯ ವಾಹನ ತಪಾಸಣಾಧಿಕಾರಿ ಸತೀಶ್ ಸಲಹೆ ನೀಡಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಂಸ್ಕೃತಿಕ ವೇದಿಕೆ, ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂಯುಕ್ತಾಶ್ರಯದಲ್ಲಿ ಬುಧವಾರ ಕಾಲೇಜಿನ ಆವರಣದಲ್ಲಿ ನಡೆದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯ ವಾಹನ ತಪಾಸಣಾಧಿಕಾರಿ ಎಸ್.ಟಿ.ಸತೀಶ್ ಮಾತನಾಡಿ ವಾಹನ ಚಲಾಯಿಸುವಾಗ ಓವರ್ ಟೇಕ್ ಮಾಡಬೇಡಿ. ಕರ್ಕಶ ಹಾರನ್  ಮಾಡಬೇಡಿ. ಎಡ ಭಾಗದಲ್ಲೇ ಚಲಿಸಿ. ಪೊಲೀಸರ ಆದೇಶ ಮತ್ತು ಟ್ರಾಫಿಕ್ ಸಿಗ್ನಲ್‍ಗಳನ್ನು ಗೌರವಿಸಿ. ದ್ವಿಚಕ್ರ ವಾಹನ ಚಾಲನೆಯಲ್ಲಿ ಸದಾ ಹೆಲ್ಮೆಟ್ ಹಾಗೂ ನಾಲ್ಕು ಚಕ್ರದ ವಾಹನ ಚಾಲನೆಯಲ್ಲಿ ಸೀಟ್‍ಬೆಲ್ಟ್ ನ್ನು ಧರಿಸಿರಿ. ಸರಿಯಾದ ವಾಹನ ಚಾಲನೆ ಕಾನೂನು ಪಾಲನೆಯಾಗಿದ್ದು ಅಪರಾಧಗಳ ಸಂಖ್ಯೆಯನ್ನು ಹೆಚ್ಚಿಸಬೇಡಿ ಎಂದು ಚಾಲನೆಯ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್, ಪ್ರಾಧ್ಯಾಪಕರಾದ ಹೆಚ್.ಎಂ.ಬಸವರಾಜು, ಡಾ.ವಿಜಯಲಕ್ಷ್ಮಿ, ಪ್ರೊ.ಎಂ.ಎಸ್.ಮನೋನ್ಮಣಿ, ಡಾ.ಹೇಮಚಂದ್ರ, ಡಾ.ಟಿ.ಎಲ್. ಜಗದೀಶ್, ಸಾಂಸ್ಕøತಿಕ ವೇದಿಕೆ ಅಧ್ಯಕ್ಷೆ ಕುಮಾರಿ ಹಾಗೂ ಆರ್‍ಟಿಓ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: