ಸುದ್ದಿ ಸಂಕ್ಷಿಪ್ತ

ದೇವಸ್ಥಾನದ ವಾರ್ಷಿಕೋತ್ಸವ : ಸಾಮೂಹಿಕ ವಿವಾಹ- ಶ್ರೀನಿವಾಸ ಕಲ್ಯಾಣೋತ್ಸವ- ಮಳೆಗಾಗಿ ಪ್ರಾರ್ಥನೆ

ಮೈಸೂರು,ಜೂ.4 : ಕಲ್ಯಾಣಗಿರಿಯ ಕಲ್ಯಾಣ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದ 7ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಏರ್ಪಡಿಸಲಾಗಿದೆ.

ಜೂ.5ರ ಬೆಳಗ್ಗೆ 10 ಗಂಟೆಗೆ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಕಲ್ಯಾಣಗಿರಿ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಉದ್ಯಮಿ ಗೋಪಿನಾಥ್ ಶಣೈ, ದಕ್ಷಿಣ ಪ್ರಾಂತ್ಯ ಸಂಘ ಸಂಚಾಲಕ ವೇ.ವೆಂಕಟರಾಮ್, ಸಚಿವ ಕೋಟೆ ಶಿವಣ್ಣ, ಮಾಜಿ ಮಹಾಪೌರ ಸಂದೇಶ್ ಸ್ವಾಮಿ, ಜಿಲ್ಲಾ ಬ್ರಾಹ್ಮನ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಚಲನಚಿತ್ರ ನಿರ್ಮಾಫಕಿ ರೂಪಾ ಅಯ್ಯರ್ ಇತರರು ಭಾಗಿಯಾಗಲಿದ್ದಾರೆ ಎಂದು ಸಂಸ್ಥಾಪಕ ಹೆಚ್.ಜಿ.ಗಿರಿಧರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: