ಪ್ರಮುಖ ಸುದ್ದಿ

ಮಹಿಳೆಯಿಂದ ಅವಮಾನ : ಚಪ್ಪಲಿಯಲ್ಲಿ ಥಳಿತ ; ಅವಮಾನ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ಯುವಕ ನೇಣಿಗೆ ಶರಣು

ರಾಜ್ಯ(ಮಂಡ್ಯ)ಜೂ.5:- ಮಹಿಳೆಯೋರ್ವರು ಚಪ್ಪಲಿಯಿಂದ ಥಳಿಸಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಮನನೊಂದ  ಯುವಕನೋರ್ವ ಅಪಮಾನ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ  ಘಟನೆ  ಕೆ.ಆರ್.ಪೇಟೆ ಪಟ್ಟಣದ ರಾಮಯ್ಯ ಕಾಲೋನಿಯಲ್ಲಿ  ನಡೆದಿದೆ.

ಮೃತನನ್ನು ಪಟ್ಟಣದ ರಾಮಯ್ಯ ಕಾಲೋನಿಯ ನಿವಾಸಿ ಬನ್ನಾರಿ ಅವರ ಪುತ್ರ ಕೆ.ಬಿ. ಸ್ವತಂತ್ರ(24) ಎಂದು ಗುರುತಿಸಲಾಗಿದ್ದು, ಮನೆಯ ಮೇಲ್ಭಾಗದ ಕೊಠಡಿಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆ.ಆರ್.ಪೇಟೆ ಪುರಸಭೆಯ ವಸತಿ ಯೋಜನಾ ವಿಭಾಗದಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕೆ.ಬಿ.ಸ್ವತಂತ್ರ ನಿನ್ನೆ ಮಧ್ಯಾಹ್ನ ಜ್ವರ ಮತ್ತು ಕೆಮ್ಮು ಇದ್ದ ಕಾರಣ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ವೈದ್ಯರನ್ನು ಭೇಟಿ ಮಾಡಲು ಸರತಿಯ ಸಾಲಿನಲ್ಲಿ ನಿಂತಿದ್ದಾಗ, ಸಾಲಿನಲ್ಲಿ ತನ್ನ ಮುಂಭಾಗದಲ್ಲಿ ಚಿಕಿತ್ಸೆ ಪಡೆಯಲು ವೈದ್ಯರನ್ನು ಭೇಟಿ ಮಾಡಲು ನಿಂತಿದ್ದ ಮಹಿಳೆ ಕಾರಣವಿಲ್ಲದೇ ಎಲ್ಲರೆದುರು ನಿಂದಿಸಿ ಚಪ್ಪಲಿಯಲ್ಲಿ ಹೊಡೆದು ಅವಮಾನ ಮಾಡಿದ್ದರು ಎನ್ನಲಾಗಿದೆ. ಇದೇ  ಕಾರಣಕ್ಕೆ ಸ್ವತಂತ್ರ  ಆಸ್ಪತ್ರೆಯ ಪಕ್ಕದಲ್ಲೇ ಇರುವ ತನ್ನ ಮನೆಗೆ ತೆರಳಿ ಘಟನೆಯ ಬಗ್ಗೆ ತನ್ನ ತಂದೆ-ತಾಯಿಗಳಿಗೆ ತಿಳಿಸದೇ ತನ್ನ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಮಲಗುವುದಾಗಿ ತಿಳಿಸಿದ್ದು, ಕೊಠಡಿಗೆ ತೆರಳಿ ರಾತ್ರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಳಿಗ್ಗೆ ತಮ್ಮ ಪುತ್ರ ಸ್ವತಂತ್ರ ಎದ್ದು ಹೊರಬರದಿದ್ದಾಗ ಅನುಮಾನಗೊಂಡ ಪೋಷಕರು ಕೊಠಡಿಯ ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವುದು ಗೊತ್ತಾಗಿದೆ. ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಕೆ.ಬಿ.ಸ್ವತಂತ್ರ ನಿಧನಕ್ಕೆ ವಾರ್ಡಿನ ಪುರಸಭೆ ಸದಸ್ಯ ಗಿರೀಶ್, ಪುರಸಭೆ ಮಾಜಿಅಧ್ಯಕ್ಷ ನಾಗರಾಜು, ಮುಖ್ಯಾಧಿಕಾರಿ ಅಶೋಕ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತ ಸ್ವತಂತ್ರ ಅವರ ಬಂಧುಗಳು ಹಾಗೂ ತಂದೆತಾಯಿಗಳ ಆಕ್ರಂದನವು ಮುಗಿಲು ಮುಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: