ಮೈಸೂರು

ಬಸ್ಸಿನ ಮೇಲೆ ದಾಳಿಗೆ ಯತ್ನಿಸಿದ ಆನೆ : ಗಾಬರಿಗೊಂಡ ಪ್ರಯಾಣಿಕರು

ಮೈಸೂರು,ಜೂ.5:-  ಬಸ್ಸೊಂದರ ಮೇಲೆ ಆನೆ ದಾಳಿಗೆ ಯತ್ನಿಸಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

ಅನಾಹುತವನ್ನು ತಪ್ಪಿಸಲು ಬಸ್ ಚಾಲಕ ಅರ್ಧ ಕಿ.ಮೀ ಬಸ್ಸನ್ನು ಹಿಮ್ಮುಖವಾಗಿ ಚಾಲನೆ ಮಾಡಿದ್ದಾರೆ. ಬಳ್ಳೆ ವಲಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು,ಈ ಮಾರ್ಗದ ಮೂಲಕ ಮಾನಂದವಾಡಿ ಕಡೆಗೆ ಬಸ್ ತೆರಳುತ್ತಿತ್ತು. ಕೇರಳ ನೋಂದಣಿಯ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಲು ಯತ್ನಿಸಿತ್ತು. ಆನೆ ಅಟ್ಟಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಚಾಲಕ ಬಸ್ ನನ್ನು ಹಿಮ್ಮುಖವಾಗಿ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಗಾಬರಿಗೊಂಡು ಬಸ್‌ನಲ್ಲಿದ್ದ ಪ್ರಯಾಣಿಕರು ಕಿರುಚಾಡಲು ಆರಂಭಿಸಿದ್ದು, ಪ್ರಯಾಣಿಕರ ಕಿರುಚಾಟದಿಂದ ಆನೆ ಹೆದರಿ ಓಡಿದೆ. ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: