ಮೈಸೂರು

ಪರಿಸರ ಸಂರಕ್ಷಣೆಯ ಕುರಿತು ಪೊಲೀಸ್ ಕಾನ್ಸಟೇಬಲ್ ಗಳು ಬೀಟ್ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುವುದು ಅನಿವಾರ್ಯ : ಪಿ.ಎಸ್.ಐ ಸಿ.ಯು. ಸವಿ

ಮೈಸೂರು,ಜೂ.5:- ಪರಿಸರ ಸಂರಕ್ಷಣೆಯ ಕುರಿತು ಪೊಲೀಸ್ ಕಾನ್ಸಟೇಬಲ್ ಗಳು ತಮ್ಮ ತಮ್ಮ ಬೀಟ್ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಹಾಗೂ ತಮ್ಮ ತಮ್ಮ ಕುಟುಂಬಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದು ಪಿ.ಎಸ್.ಐ ಸಿ.ಯು. ಸವಿ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಆರಕ್ಷಕ ಠಾಣೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಠಾಣೆಯ  ಆವರಣದಲ್ಲಿ ಸಸಿಯನ್ನು ನೆಡಲಾಯಿತು. ಬಳಿಕ ಮಾತನಾಡಿದ ಅವರು ಬೆಳೆಯತ್ತಿರುವ ವಿಜ್ಞಾನ ತಂತ್ರಜ್ಞಾನದಿಂದಾಗಿ ಪರಿಸರದಿಂದ ನಾವು ದೂರವಾಗುತ್ತಿದ್ದೇವೆ. ಇತ್ತೀಚೆಗಿನ ವರ್ಷಗಳಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಪರಿಸರದಿಂದ ದೂರವಾಗುತ್ತಿದ್ದಾರೆ ಎಂದರು. ಕೆಲ ವರ್ಷಗಳ ಹಿಂದೆ ಮಕ್ಕಳು ಪರಿಸರದೊಂದಿಗೆ ಆಟವಾಡುತ್ತ ಬೆಳೆಯುತ್ತಿದ್ದರು, ಆದರೆ ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಜೊತೆ ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾಗಿ ಬೆಳೆಯಬೇಕು, ಆದರೆ ಬದಲಾಗುತ್ತಿರುವ ಮಾನವನ ಜೀವನಶೈಲಿ ಪರಿಸರದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ, ಅರಣ್ಯ ನಾಶದಿಂದ ಪ್ರಕೃತಿ ವಿಕೋಪ ಹೆಚ್ಚುತ್ತಿವೆ ಎಂದು ವಿಷಾದಿಸಿದರು.

ಈ ಸಂದರ್ಭ ಸಿಬ್ಬಂದಿಗಳಾದ ಎಎಸ್‍ಐ ಶಿವರಾಜ್, ಅಶೋಕ, ಅಣ್ಣಯ್ಯ, ವನಿತಾ. ತ್ರಿನೇಶ್, ರವಿ, ಸಿದ್ದರಾಜು, ಉಮೇಶ್, ಇದ್ದರು. (ಆರ್.ಬಿ.ಆರ್, ಎಸ್.ಎಚ್)

Leave a Reply

comments

Related Articles

error: