ಪ್ರಮುಖ ಸುದ್ದಿ

ಜಿಂದಾಲ್ ಸರ್ಕಾರಕ್ಕೆ ಬಾಕಿ ಹಣ ನೀಡಬೇಕಿದ್ದು ದಾಖಲೆ ಸಮೇತ ಜಾರ್ಜ್ ಗೆ ಪತ್ರ ಬರೆದಿದ್ದೇನೆ : ಹೆಚ್. ಕೆ.ಪಾಟೀಲ್

ರಾಜ್ಯ(ಬೆಂಗಳೂರು)ಜೂ.5:-ಜಿಂದಾಲ್ ಗೆ ಜಮೀನು ನೀಡಿಕೆ ವಿಚಾರ ಸಂಬಂಧ ಕೈಗಾರಿಕಾ ಸಚಿವ ಕೆ ಜೆ ಜಾರ್ಜ್ ಜಿಂದಾಲ್ ಕಂಪನಿ ಸರ್ಕಾರಕ್ಕೆ ಯಾವುದೇ ಬಾಕಿ ಕೊಡಬೇಕಿಲ್ಲ ಅಂತ ಹೇಳಿದ್ದರು. ಆದರೆ ಜಿಂದಾಲ್ ಸರ್ಕಾರಕ್ಕೆ ಬಾಕಿ ಹಣ ನೀಡಬೇಕಿದೆ. ನಾನು ದಾಖಲೆ ಸಮೇತ ಜಾರ್ಜ್ ಗೆ ಪತ್ರ ಬರೆದಿದ್ದೇನೆ ಎಂದು ಕಾಂಗ್ರೆಸ್ ನಾಯಕ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಕೆ ಪಾಟೀಲ್,  ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡುವ ಮೊದಲು ಎಚ್ಚರಿಕೆ ವಹಿಸಿ ಅಂತಾ ಹೇಳಿದ್ದೆ . ಆದರೂ ನಿರ್ಣಯ ಮಾಡಿದ್ದಾರೆ. ಕಾನೂನು ಇಲಾಖೆ ಅಭಿಪ್ರಾಯವನ್ನಾದರೂ ಗಂಭೀರವಾಗಿ ಪರಿಗಣಿಸಬೇಕಿತ್ತು. ಈಗಲಾದರೂ ನಿರ್ಣಯವನ್ನು ಸರ್ಕಾರ ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.

ಅತೃಪ್ತ  ಕಾಂಗ್ರೆಸ್ ನಾಯಕರ ಕುರಿತು ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್,  ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಹಾಗೂ ಸುಧಾಕರ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅದರಲ್ಲೂ ಹಿರಿಯ ನಾಯಕರು ಅಸಮಾಧಾನವನ್ನು ಹೊರಹಾಕುತ್ತಿರುವ ಈ ಸಂದರ್ಭದಲ್ಲಿ ಹೈಕಮಾಂಡ್ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಹಿರಿಯ ಮುಖಂಡರನ್ನು ಕರೆಸಿಕೊಂಡು ಚರ್ಚೆ ಮಾಡಿ, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದಕ್ಕೆ ನಾನು ಹೇಳ್ತಿರೋದು, ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ರಾಹುಲ್ ಗಾಂಧಿ ಅವರು ಕರೆದು ತೀರ್ಮಾನ ಮಾಡಲಿ. ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರು. ಪಕ್ಷವನ್ನು ಎಲ್ಲ ಸೇರಿ ಸದೃಢಗೊಳಿಸಬೇಕಾಗಿದೆ. ಎಲ್ಲರೂ ಅತ್ತ ಗಮನ ನೀಡಬೇಕಿದೆ ಎಂದು  ಹೆಚ್.ಕೆ ಪಾಟೀಲ್ ಸಲಹೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: