ಮೈಸೂರು

ವ್ಯಕ್ತಿಗೆ ಮಹಿಳಾ ಎಸ್ ಐ ನಿಂದ ಹಲ್ಲೆ, ಅವಾಚ್ಯ ಶಬ್ದದಿಂದ ನಿಂದನೆ : ಎಫ್ ಐ ಆರ್ ದಾಖಲು

ಮೈಸೂರು,ಜೂ.5:- ಟಿ.ನರಸೀಪುರ ಠಾಣೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ  ಎಸ್ ಐ ಓರ್ವರು ಬೈಕ್ ಗೆ ಡಿಕ್ಕಿ ಹೊಡೆದಿದ್ದಲ್ಲದೇ ನನ್ನ ಶರ್ಟ್ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಹೊಟ್ಟೆಗೆ, ಮರ್ಮಾಂಗಕ್ಕೆ ಹೊಡೆದಿದ್ದಾರೆಂದು ವ್ಯಕ್ತಿಯೋರ್ವರು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ ಐ ಆರ್ ದಾಖಲಾಗಿದೆ.

ಹೆಬ್ಬಾಳು ಅಭಿಷೇಕ್ ಸರ್ಕಲ್ ನಿವಾಸಿ ಪರಮೇಶ್ ಎಂಬವರೇ ದೂರು ದಾಖಲಿಸಿದ್ದಾರೆ. ನಿನ್ನೆ ರಾತ್ರಿ 8.30ರ ವೇಳೆ ಗಾಯತ್ರಿಪುರಂ ಬಳಿ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಎದುರಾದ  ಎಸ್ ಐ ಯಾಸ್ಮಿನ್ ತಾಜ್ ಮತ್ತವರ ಅಪ್ರಾಪ್ತ ಪುತ್ರ ಬೈಕ್ ನಲ್ಲಿ ಬಂದು ಡಿಕ್ಕಿ ಮಾಡಿದ್ದಲ್ಲದೇ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ದೂರು ಕೊಟ್ಟರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಿ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: