ಪ್ರಮುಖ ಸುದ್ದಿಮೈಸೂರು

ಜಮೀನು ಕಬಳಿಕೆ ವಿರುದ್ಧ ಕುಟುಂಬಸ್ಥರ ಪ್ರತಿಭಟನೆ ನಾಳೆ

ಮೈಸೂರು,ಜೂ.5 : ಸ್ಕಿಲ್ ಟೆಕ್ ಸಂಸ್ಥೆ ಹಾಗೂ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಜಂಟಿಯಾಗಿ ಸುಳ್ಳು ದಾಖಲೆ ಪತ್ರ ನಿರ್ಮಿಸಿಕೊಂಡು ಜಮೀನನ್ನು ಸ್ವಾಧೀನ ಪಡಿಸಿಕೊಂಡು ವಂಚಿಸಿರುವ ವಿರುದ್ಧ ಜೂ.6ರಂದು ಬೆಳಗ್ಗೆ 10 ಗಂಟೆಗೆ ಬನ್ನೂರು ರಸ್ತೆಯ ಮಾನಸಿ ನಗರದಲ್ಲಿ ಜಮೀನಿನ ಮಾಲೀಕರು ಹೋರಾಟವನ್ನು ಹಮ್ಮಿಕೊಂಡಿದ್ದಾರೆ.

ಹಂಚ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 174, 176/1ಬಿ ಮತ್ತು 176/2ಬಿ  ಭೂಮಿಯನ್ನು ಸ್ಕಿಲ್ ಟೆಕ್ ಸಂಸ್ಥೆ ಮಾಲೀಕರಾದ ಶಿವಶಂಕರ್ ಹಾಗೂ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಜಂಟಿಯಾಗಿ ಸುಳ್ಳು ದಾಖಲೆಗಳನ್ನು ನಿರ್ಮಿಸಿ ವಶಪಡಿಸಿಕೊಂಡು ತಮ್ಮ ಕುಟುಂಬವನ್ನು ವಂಚಿಸಿದ್ದು, ಇದರ ವಿರುದ್ಧ ಜಮೀನನಲ್ಲಿಯೇ ಕುಟುಂಬಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಯರಗನಹಳ್ಳಿ ಗ್ರಾಮದ ಪುಟ್ಟಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: