ಸುದ್ದಿ ಸಂಕ್ಷಿಪ್ತ
ಜೂ.9ರಂದು ಫಿಟ್ ನೆಸ್ ಸ್ಟುಡಿಯೋ -ಬ್ಯಾಡ್ ಮಿಂಟನ್ ಅಕಾಡೆಮಿ ಉದ್ಘಾಟನೆ
ಮೈಸೂರು,ಜೂ.5 : ಮಿತ್ರ ಫೌಂಡೇಷನ್ ವತಿಯಿಂದ ಟೆನ್ಸೈಲ್ ಅರೆನಾ ಫಿಟ್ ನೆಸ್ ಸ್ಟುಡಿಯೋ ಮತ್ತು ಬ್ಯಾಡ್ ಮಿಂಟನ್ ಅಕಾಡೆಮಿಯ ಉದ್ಘಾಟನೆ ಸಮಾರಂಭವನ್ನು ಜೂ.9ರಂದು ಬೆಳಗ್ಗೆ 10 ಗಂಟೆಗೆ ವಿಜಯನಗರದ 1ನೇ ಹಂತದ ಮುಡಾ ಕ್ರೀಡಾ ಸಂಕೀರ್ಣದಲ್ಲಿ ಏರ್ಪಡಿಸಲಾಗಿದೆ.
ಆದಿಚುಂಚನಗಿರಿ ಶಾಖಾ ಮಠದ ಶ್ರೀಸೋಮನಾಥೇಶ್ವರ ಸ್ವಾಮೀಜಿ, ಮೇಲುಕೋಟೆಯ ಶಲ್ವಪಿಳ್ಳೈ ಅಯ್ಯಂಗಾರ್ ಸಾನಿಧ್ಯ ವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕರಾದ ,ನಾಗೇಂದ್ರ, ಎನ್. ಮಹೇಶ್, ಮಾಜಿ ಶಾಸಕ ವಾಸು ಇತರ ಗಣ್ಯರು ಹಾಜರಿರಲಿದ್ದಾರೆ. (ಕೆ.ಎಂ.ಆರ್)