ಕ್ರೀಡೆ

ವಿಶ್ವಕಪ್ ಟೂರ್ನಿ: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಆರು ವಿಕೆಟ್ ಗಳ ಜಯ

ಸೌತಾಂಪ್ಟನ್,ಜೂ.6-ವಿಶ್ವಕಪ್ ಟೂರ್ನಿಯಲ್ಲಿ ನಿನ್ನೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಅತ್ತ ಹ್ಯಾಟ್ರಿಕ್ ಸೋಲಿಗೆ ಗುರಿಯಾಗಿರುವ ದಕ್ಷಿಣ ಆಫ್ರಿಕಾ ಭಾರಿ ಮುಖಭಂಗಕ್ಕೊಳಗಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 227 ಗಳಿಸಿತು. 228 ರನ್ ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 47.3 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ರೋಹಿತ್ ಶರ್ಮಾ (122*) ಸಮಯೋಚಿತ ಅಜೇಯ ಶತಕದ ನೆರವಿನಿಂದ ಭಾರತ ಗೆಲುವು ಸಾಧಿಸಲು ಸಾಧ್ಯವಾಯಿತು. ಭಾರತದ ಆರಂಭ ಉತ್ತಮವಾಗಿರಲಿಲ್ಲ. ಕಗಿಸೋ ರಬಾಡ ದಾಳಿಯಲ್ಲಿ ಎಂಟು ರನ್ ಗಳಿಸಿದ ಶಿಖರ್ ಧವನ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು

ನಡುವೆ ಜೀವದಾನದ ಪ್ರಯೋಜನ ಪಡೆದ ರೋಹಿತ್, ರಬಾಡ ಓವರ್ವೊಂದರಲ್ಲಿ 15 ರನ್ ಸಿಡಿಸಿದರು. ಆದರೂ ಭಾರತ 10 ಓವರ್ಗಳಲ್ಲಿ 34 ರನ್ಗಳನ್ನಷ್ಟೇ ಗಳಿಸಿತ್ತು. ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ಸಹ ನಿಧಾನಗತಿಯ ಆರಂಭ ಪಡೆದರು

ಕ್ರೀಸಿನಲ್ಲಿ ನೆಲೆಯೂರಲು ಸಾಕಷ್ಟು ಪ್ರಯತ್ನಪಟ್ಟ ಕೊಹ್ಲಿ ಕೊನೆಗೂ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ಎಸೆತಗಳನ್ನು ಎದುರಿಸಿದ ಕೊಹ್ಲಿ ಬೌಂಡರಿ ನೆರವಿನಿಂದ 18 ರನ್ ಗಳಿಸಿದರು. ಮೂಲಕ ವಿಶ್ವಕಪ್ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಶತಕದಿಂದ ವಂಚಿತವಾದರು. ಹಿಂದೆ 2011 ಹಾಗೂ 2015 ವಿಶ್ವಕಪ್ ಮೊದಲ ಪಂದ್ಯಗಳಲ್ಲಿ ಶತಕಗಳ ಸಾಧನೆ ಮಾಡಿದರು

ಬಳಿಕ ಕೆ.ಎಲ್.ರಾಹುಲ್ ಜತೆ ಸೇರಿದ ರೋಹಿತ್ ತಂಡವನ್ನು ಮುನ್ನಡೆಸಿದರು. ರೋಹಿತ್ 69 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರುರೋಹಿತ್ರಾಹುಲ್ ಜೋಡಿಯು ಎಚ್ಚರಿಕೆಯ ಜತೆಗೆ ಕಳಪೆ ಎಸೆತಗಳನ್ನು ದಂಡಿಸುತ್ತಲೇ ಸಾಗಿದರು. ಮೂಲಕ ಮಹತ್ವದ ಜತೆಯಾಟದಲ್ಲಿ ಭಾಗಿಯಾದರು

ನಡುವೆ ದಾಳಿಗಿಳಿದ ರಬಾಡ ಮಗದೊಮ್ಮೆ ಜತೆಯಾಟವನ್ನು ಮುರಿದರು. ಉತ್ತಮವಾಗಿ ಆಡುತ್ತಿದ್ದ ರಾಹುಲ್ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 42 ಎಸೆತಗಳನ್ನು ಎದುರಿಸಿದ ರಾಹುಲ್ 26 ರನ್ ಗಳಿಸಿದರು. ಆದರೂ ಮೂರನೇ ವಿಕೆಟ್ಗೆ 85 ರನ್ಗಳ ಜತೆಯಾಟದಲ್ಲಿ ಭಾಗಿಯಾದರುಮಹೇಂದ್ರ ಸಿಂಗ್ ಧೋನಿ ಕ್ರೀಸಿಗಿಳಿದ ಪಂದ್ಯವು ಮತ್ತಷ್ಟು ರೋಚಕ ಹಂತವನ್ನು ತಲುಪಿತು.

40 ಓವರ್ಗಳ ವೇಳೆಗೆ ಭಾರತದ ಸ್ಕೋರ್ 171/3. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 57 ರನ್ಗಳ ಅವಶ್ಯಕತೆಯಿತ್ತು. ಅತ್ತ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ರೋಹಿತ್ 128 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರುಗೆಲುವಿನಂಚಿನಲ್ಲಿ ರೋಹಿತ್ ಮಗದೊಂದು ಜೀವದಾನ ಪಡೆದರು. ನಡುವೆ ಮಾಜಿ ನಾಯಕ ಧೋನಿ ಎಡವಿ ಬಿದ್ದರು. 46 ಎಸೆತಗಳನ್ನು ಎದುರಿಸಿದ ಧೋನಿ 34 ರನ್ ಗಳಿಸಿದರು. ಅಲ್ಲದೆ ರೋಹಿತ್ ಜತೆಗೆ ನಾಲ್ಕನೇ ವಿಕೆಟ್ಗೆ 74 ರನ್ಗಳ ಜತೆಯಾಟದಲ್ಲಿ ಭಾಗಿಯಾದರು

ಬಳಿಕ ಕ್ರೀಸಿಗಿಳಿದ ಹಾರ್ದಿಕ್ ಪಾಂಡ್ಯ ಗೆಲುವಿನ ಔಪಚಾರಿಕತೆಯ್ನು ಪೂರ್ಣಗೊಳಿಸಿದರು. 7 ಎಸೆತಗಳನ್ನು ಎದುರಿಸಿದ ಪಾಂಡ್ಯ ಮೂರು ಬೌಂಡರಿಗಳಿಂದ 15 ರನ್ ಗಳಿಸಿ ಔಟಾಗದೆ ಉಳಿದರುಇನ್ನೊಂದೆಡೆ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೋಹಿತ್ 144 ಎಸೆತಗಳಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್ಗಳಿಂದ 122 ರನ್ ಗಳಿಸಿ ಅಜೇಯರಾಗುಳಿದರು. ಮೂಲಕ 2.3 ಓವರ್ಗಳು ಬಾಕಿ ಉಳಿದಿರುವಂತೆಯೇ ಭಾರತ ಗೆಲುವಿನ ದಡ ಸೇರಿತು. ದಕ್ಷಿಣ ಆಫ್ರಿಕಾ ಪರ ರಬಾಡ ಎರಡು ವಿಕೆಟ್ ಕಬಳಿಸಿದರು

ಮೊದಲು ಟೀಂ ಇಂಡಿಯಾ ಬೌಲರ್ಗಳ ನಿಖರ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ಭಾರತದ ಪರ ಯುಜ್ವೇಂದ್ರ ಚಹಲ್ ನಾಲ್ಕು, ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ತಲಾ ಎರಡು ವಿಕೆಟ್, ಕುಲಿದೀಪ್ ಒಂದು ವಿಕೆಟ್ ಕಬಳಿಸಿದರು.

ದಕ್ಷಿಣ ಆಫ್ರಿಕಾಗೆ ಆರಂಭದಲ್ಲೇ ವಿಶ್ವದ ನಂ.1 ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಆಘಾತ ನೀಡಿದರು. ಪರಿಣಾಮ 6 ರನ್ ಗಳಿಸಿದ ಆಮ್ಲಾ ಪೆವಿಲಿಯನ್ಗೆ ಮರಳಿದರುಬುಮ್ರಾ ಹಾಗೂ ಭುವಿ ನಿಖರ ದಾಳಿ ಸಂಘಟಿಸಿದರು. ಮುಂಬೈ ಇಂಡಿಯನ್ಸ್ ಸಹ ಆಟಗಾರ ಕ್ವಿಂಟನ್ ಡಿ ಕಾಕ್ರಿಗೂ (10) ಭುವಿ ಪೆವಿಲಿಯನ್ ಹಾದಿ ತೋರಿಸಿದರು. ಇದರೊಂದಿಗೆ 24 ರನ್ ಅಂತರದಲ್ಲಿ ಆರಂಭಿಕರನ್ನು ಕಳೆದುಕೊಂಡ ಹರಿಣಗಳ ತಂಡ ಸಂಕಷ್ಟಕ್ಕೊಳಗಾಯಿತು

ಹಂತದಲ್ಲಿ ಜತೆಗೂಡಿದ ನಾಯಕ ಫಾಫ್ ಡು ಪ್ಲೆಸಿಸ್, ರಾಸೀ ವ್ಯಾನ್ ಡೆರ್ ದುಸಾನ್ ನಿಧಾನವಾಗಿ ಇನ್ನಿಂಗ್ಸ್ ಬೆಳೆಸಿದರು. ಪ್ಲೆಸಿಸ್ ಹಾಗೂ ದುಸಾನ್ 54 ರನ್ಗಳ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಯತ್ನ ಮಾಡಿದರು. ಹಂತದಲ್ಲಿ ದಾಳಿಗಿಳಿದ ಯುಜ್ವೇಂದ್ರ ಚಹಲ್ ಇನ್ನಿಂಗ್ಸ್ 20ನೇ ಓವರ್ನಲ್ಲಿ ಸೆಟ್ ಬ್ಯಾಟ್ಸ್ಮನ್ಗಳಾದ ದುಸಾನ್ ಹಾಗೂ ಪ್ಲೆಸಿಸ್ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಡಬಲ್ ಆಘಾತ ನೀಡಿದರು

ಇದರೊಂದಿಗೆ ಹರಿಣಗಳ ತಂಡ 80 ರನ್ನಿಗೆ ನಾಲ್ಕು ಪ್ರಮುಖ ವಿಕೆಟುಗಳನ್ನು ಕಳೆದುಕೊಂಡಿತು. 54 ಎಸೆತಗಳನ್ನು ಎದುರಿಸಿದ ಪ್ಲೆಸಿಸ್ ನಾಲ್ಕು ಬೌಂಡರಿಗಳಿಂದ 38 ರನ್ ಗಳಿಸಿದರು. ಅತ್ತ ದುಸಾನ್ 37 ಎಸೆತಗಳಲ್ಲಿ ಬೌಂಡರಿಯಿಂದ 22 ರನ್ ಗಳಿಸಿದರುಚಹಲ್ ಜತೆ ಕೈಜೋಡಿಸಿದ ಕುಲ್ದೀಪ್ ಯಾದವ್ ಸಹ ಜೆಪಿ ಡ್ಯುಮಿನಿರನ್ನು ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಇದರೊಂದಿಗೆ 22.5 ಓವರ್ಗಳಲ್ಲಿ 89 ರನ್ಗಳಿಗೆ ದಕ್ಷಿಣ ಆಫ್ರಿಕಾದ ಅರ್ಧ ತಂಡವು ಪೆವಿಲಿಯನ್ಗೆ ಸೇರಿಕೊಂಡಿತು

ಹಂತದಲ್ಲಿ ಜತೆಗೂಡಿದ ಡೇವಿಡ್ ಮಿಲ್ಲರ್ ಹಾಗೂ ಆ್ಯಂಡಿಲ್ ಪೆಹ್ಲುಕಾಯೊ ತಂಡವನ್ನು ಮುನ್ನಡೆಸಿದರು. ಅಗ್ರ ಕ್ರಮಾಂಕವನ್ನು ಹೋಲಿಸಿದರೆ ಹೆಚ್ಚು ಅರ್ಪಣಾ ಮನೋಭಾವದಿಂದ ಭಾರತೀಯ ಬೌಲರ್ಗಳನ್ನು ಎದುರಿಸಿದರು. ಇದರಿಂದಾಗಿ .ಆಫ್ರಿಕಾ 30 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತು

ನಡುವೆ ಉತ್ತಮವಾಗಿ ಆಡುತ್ತಿದ್ದ ಮಿಲ್ಲರ್ರನ್ನು ತಮ್ಮ ದಾಳಿಯಲ್ಲಿ ಕ್ಯಾಚ್ ಪಡೆಯುವ ಮೂಲಕ ಚಹಲ್ ಹೊರದಬ್ಬಿದರು. ಇದರೊಂದಿಗೆ 46 ರನ್ಗಳ ಜತೆಯಾಟವು ಮುರಿದು ಬಿತ್ತು. 40 ಎಸೆತಗಳನ್ನು ಎದುರಿಸಿದ ಮಿಲ್ಲರ್ ಬೌಂಡರಿ ನೆರವಿನಿಂದ 31 ರನ್ ಗಳಿಸಿದರು

ಮಹೇಂದ್ರ ಸಿಂಗ್ ಧೋನಿ ಸ್ಟಂಪಿಂಗ್ ಹೊರತಾಗಿ ಇನ್ನಿಂಗ್ಸ್ ಅಪೂರ್ಣವೆಂಬಂತೆ ಚಹಲ್ ದಾಳಿಯಲ್ಲಿ ಸ್ಟಂಪಿಂಗ್ ಮೂಲಕ ಸೆಟ್ ಬ್ಯಾಟ್ಸ್ಮನ್ ಪೆಹ್ಲುಕಾಯೊಗೆ ಪೆವಿಲಿಯನ್ ಹಾದಿ ತೋರಿಸಿದರು. 61 ಎಸೆತಗಳನ್ನು ಎದುರಿಸಿದ ಪೆಹ್ಲುಕಾಯೊ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 34 ರನ್ ಗಳಿಸಿದರು.

ಇನ್ನೇನು ಕನಿಷ್ಠ ರನ್ನಿಗೆ ಆಲೌಟಾಗಲಿದೆ ಎಂದು ಅಂದುಕೊಂಡಾಗ ಕೊನೆಯ ಹಂತದಲ್ಲಿ ನಿರ್ಣಾಯಕ ಜತೆಯಾಟದಲ್ಲಿ ಭಾಗಿಯಾದ ಕ್ರಿಸ್ ಮೊರಿಸ್ ಹಾಗೂ ಕಗಿಸೋ ರಬಾಡ ಪಂದ್ಯದ ಚಿತ್ರಣವನ್ನು ಬದಲಾಯಿಸಿದರು. ಅಲ್ಲದೆ ಹರಿಣಗಳ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು.

ಮೊರಿಸ್ ಹಾಗೂ ರಬಾಡ ಎಂಟನೇ ವಿಕೆಟ್ಗೆ 66 ರನ್ಗಳ ಮಹತ್ವದ ಜತೆಯಾಟವನ್ನು ನೀಡಿದರು. ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 227 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. 34 ಎಸೆತಗಳನ್ನು ಎದುರಿಸಿದ ಮೊರಿಸ್ ಬೌಂಡರಿ ಹಾಗೂ ಎರಡು ಸಿಕ್ಸರ್ಗಳಿಂದ 42 ರನ್ ಗಳಿಸಿದರು. ಅದೇ ರೀತಿ ರಬಾಡ 35 ಎಸೆತಗಳಲ್ಲಿ ಎರಡು ಬೌಂಡರಿಗಳಿಂದ 31 ರನ್ ಗಳಿಸಿ ಔಟಾಗದೆ ಉಳಿದರು. (ಎಂ.ಎನ್)

Leave a Reply

comments

Related Articles

error: