ಕ್ರೀಡೆ

ನೇಷನ್ಸ್ ಲೀಗ್ ಪಂದ್ಯಾವಳಿ: ಫೈನಲ್ ಗೆ ಪೋರ್ಚುಗಲ್ ತಂಡ; ರೊನಾಲ್ಡೊ ಹ್ಯಾಟ್ರಿಕ್ ಗೋಲು

ಪೋರ್ಟೊ,(ಪೋರ್ಚ್ಗಲ್),ಜೂ.6-ಪ್ರತಿಷ್ಠಿತ ನೇಷನ್ಸ್ ಲೀಗ್ ಪಂದ್ಯಾವಳಿಯಲ್ಲಿ ಪೋರ್ಚುಗಲ್ ತಂಡ, ಸ್ವಿಡ್ಜರ್ಲೆಂಡ್ ತಂಡವನ್ನು 3-1 ಗೋಲುಗಳಿಂದ ಬಗ್ಗುಬಡಿದು ಫೈನಲ್ ತಲುಪಿತು.

ಕ್ರಿಸ್ಟಿಯಾನೊ ರೊನಾಲ್ಡೊ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡ ಗೆಲುವು ಸಾಧಿಸಿತು. ಪಂದ್ಯದ ಮೊದಲಾರ್ಧದಲ್ಲಿ ರೊನಾಲ್ಡೊ ಫ್ರೀ ಕಿಕ್ ಮೂಲಕ ಖಾತೆ ತೆರೆದರು. ಆದರೆ ಎದುರಾಳಿ ತಂಡದ ರಿಕಾರ್ಡೊ ರೊಡ್ರಿಗ್ಸ್ ಸ್ಕೋರ್ ಸಮಗೊಳಿಸಿದರು. ಸಮಬಲದ ಹೋರಾಟದ ಬಳಿಕ ಆಟ ಇನ್ನೇನು ಹೆಚ್ಚುವರಿ ಅವಧಿಗೆ ವಿಸ್ತರಿಸಲ್ಪಡುತ್ತದೆ ಎಂಬ ಸ್ಥಿತಿಯಲ್ಲಿ, ಕೊನೆಯ ಎರಡು ನಿಮಿಷಗಳಲ್ಲಿ ರೊನಾಲ್ಡೊ ಎರಡು ಗೋಲು ಸಾಧಿಸಿ ಹೀರೊ ಎನಿಸಿಕೊಂಡರು.

ಇದಕ್ಕೂ ಮುನ್ನ ಪೋರ್ಚುಗಲ್ ಗೆ ಸ್ಪಾಟ್ಕಿಕ್ ಅವಕಾಶ ನೀಡಿದ ರೆಫ್ರಿ ಕ್ರಮದ ವಿರುದ್ಧ ವಿಎಆರ್ ರಿವ್ಯೆಗೆ ಸ್ವಿಸ್ ತಂಡ ಮೊರೆಹೋಗಿ ಯಶಸ್ವಿಯಾಯಿತು.

ಅತಿಥೇಯ ಪೋರ್ಚುಗಲ್ ತಂಡ ಗುರುವಾರ ನಡೆಯುವ ಇಂಗ್ಲೆಡ್ನೆದರ್ಲೆಂಡ್ ನಡುವಿನ ಕದನದಲ್ಲಿ ಗೆಲ್ಲುವ ತಂಡವನ್ನು ಜೂ.9 ರಂದು ಫೈನಲ್ನಲ್ಲಿ ಎದುರಿಸಲಿದೆ.

ಸಾರ್ವಕಾಲಿಕ ಅತ್ಯಧಿಕ ಗೋಲುಗಳಿಸಿದ ದಾಖಲೆಯ ರೊನಾಲ್ಡೊ ಅವರ ನೆರವು ಇಲ್ಲದೇ ಪೋರ್ಚುಗಲ್ ಸೆಮಿ ಫೈನಲ್ ತಲುಪಿತ್ತು. ಆದಾಗ್ಯೂ ಬಾರಿ ವರ್ಷದ ಆಟಗಾರ ಪ್ರಶಸ್ತಿ ಗೆದ್ದ ರೊನಾಲ್ಡೊ, ಗೆಲುವಿನ ಹ್ಯಾಟ್ರಿಕ್ ಮೂಲಕ ಭರ್ಜರಿ ಪುನರಾಗಮನ ಸಾರಿದರು. (ಎಂ.ಎನ್)

 

Leave a Reply

comments

Related Articles

error: