ಪ್ರಮುಖ ಸುದ್ದಿಮೈಸೂರು

2018ರಲ್ಲಿ ನಡೆಯಲಿದೆ ಶ್ರವಣಬೆಳಗೊಳದ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕ : ವಿವಿಧ ಕಾಮಗಾರಿಗಳಿಗೆ ಚಾಲನೆ

2018 ರ ಶ್ರವಣ ಬೆಳಗೊಳದ ಬಾಹುಬಲಿ‌ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಸುವ ಹಿನ್ನಲೆಯಲ್ಲಿ ಗುರುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ‌‌ ನೀಡಲಾಯಿತು.  ರಾಜ್ಯ ಸರ್ಕಾರದಿಂದ 575ಕೋಟಿ ರೂ.ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿರುವ ಸರ್ಕಾರ ಪ್ರಾಥಮಿಕವಾಗಿ 5ಕೋಟಿ.ರೂ ಬಿಡುಗಡೆ ಮಾಡಿದೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ 2018ರ ಫೆಬ್ರವರಿಯಲ್ಲಿ ನಡೆಯಲಿದೆ.

ಸ್ವಸ್ತಿಶ್ರೀ ಚಾರುಕಿರ್ತೀ ಭಟ್ಟಾರಕ ಸ್ವಾಮೀಜಿ ಚಿನ್ನದ ಉಳಿಯೊಂದಿಗೆ ಬೆಳ್ಳಿಯ ಸುತ್ತಿಗೆಯಲ್ಲಿ ನಿಗದಿ ಪಡಿಸಿದ ಸ್ಥಳದಲ್ಲಿ ಕಲ್ಲಿಗೆ ಉಳಿ ಹೊಡೆಯುವ ಮೂಲಕ ಮೆಟ್ಟಿಲು ಕಾಮಗಾರಿಗೆ ಅಧಿಕೃತ ವಾಗಿ ಚಾಲನೆ ನೀಡಿದರು. ಮಾತ್ರವಲ್ಲದೇ ಮೂಲಭೂತ ಸೌಕರ್ಯಗಳ ಕಾಮಗಾರಿಗೂ ಚಾಲನೆ ನೀಡಿದರು.

ವಿಂದ್ಯಾಗಿರಿಯ ಕೆಳ ಭಾಗದಲ್ಲಿ ಮೆಟ್ಟಿಲುಗಳಿಗೆ ಚಾಲನೆ ನೀಡಿದ‌ ಸ್ವಾಮೀಜಿ ಬಳಿಕ ಮಾತನಾಡಿ ಶ್ರವಣಬೆಳಗೊಳದಲ್ಲಿ ಸಮಸ್ಯೆ ಇದೆ. ಅದಕ್ಕೆ ಒಂದೊಂದೇ ಪರಿಹಾರವೂ ಸಿಗುತ್ತಿದೆ. ಪ್ರವಾಸಿಗರು ಹಾಗೂ ಭಕ್ತರಿಗೆ ಸೌಲಭ್ಯ ಒದಗಿಸುವುದು ರಾಜ್ಯ ಹಾಗೂ ಕೇಂದ್ರದ ಜವಾಬ್ದಾರಿ ಎಂದರು. ಸೌಕರ್ಯ ಇದ್ದರೆ  ಮಾತ್ರ ಪ್ರವಾಸಿಗರು ಬರುತ್ತಾರೆ. ಕರ್ನಾಟಕ ಮಾತ್ರವಲ್ಲದೇ ಭಾರತ ಸೇರಿದಂತೆ ಅಲೆಗ್ಸಾಂಡರ್ ನನ್ನು ಸೋಲಿಸಿದ ಮೌರ್ಯ ಗುಪ್ತರು ಬಂದು ನೆಲೆಸಿದ ಪುಣ್ಯ ನೆಲವಿಂದು ಇತಿಹಾಸದ ಪುಟ ಸೇರಿದೆ. ಮಹಾವೀರ ಪರಂಪರೆಯಲ್ಲಿ 8ನೇ ತೀರ್ಥಂಕರರು ‌ಭದ್ರಬಾಹು.  ಅಂದು 12  ಸಾವಿರ ಮುನಿಗಳಿದ್ದರು. ಆದರೆ ಇವತ್ತು 700 ಮುನಿಗಳಿದ್ದಾರೆ. ಅಂದು ತಪ್ಪಸ್ಸನ್ನು  ಗುಹೆಗಳಲ್ಲಿ ಮಾಡುತ್ತಿದ್ದರು. ಮುನಿಗಳ ತಪ್ಪಸಿಗೆ ಶ್ರವಣಬೆಳಗೊಳ ಪ್ರಸಿದ್ದಿಯಾಗಿತ್ತು. 1981 ಮಾರ್ಚ್ ವೇಳೆ ಪ್ರಥಮ ಅಭಿಷೇಕ ಆಯಿತು. ಈ ಕ್ಷೇತ್ರದ ಮಹಿಮೆ ಕೂಡ ಅಂತಹುದ್ದೇ ಆಗಿದೆ. ಗುಳಿಕ ಅಜ್ಜಿ ಅಂದು ಅಭಿಷೇಕ ಮಾಡಿದ್ದರು ಈಗಲೂ ಬಾಹುಬಲಿಯ ‌ಮುಂಭಾಗ ಚಿತ್ರಣವಿದೆ ಎಂದರು.

ಮಂಜು ಅವರು  ಮಾತನಾಡಿ ಇದಕ್ಕೆ‌ 5 ಕೋಟಿ ಅನುದಾನ ನೀಡಲಾಗಿದೆ. ಕೇಂದ್ರದಿಂದ 42 ಲಕ್ಷ ರೂ. ಬಂದಿದೆ. ಬಾಹುಬಲಿಯ ಸ್ಮಾರಕ ರಾಷ್ಟ್ರೀಯ ಸ್ಮಾರಕ ಆಗಿದೆ. ಇದೀಗ ಎಲ್ಲರ ಸಹಕಾರ ಬೇಕು ಎಂದರು.  ಬೆಂಗಳೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಅಧೀಕ್ಷಕ ಅರುಣ್ ರಾಜ್ ಮಾತನಾಡಿ, ಮೊದಲಿಗೆ ಭೂಮಿ ಪೂಜೆ ಮಾಡಿದ್ದಾರೆ.  ಕರ್ನಾಟಕದಲ್ಲಿ ಜೈನ್ ಸಮಾಜದ ಬಗ್ಗೆ ತುಂಬಾನೇ ಇತಿಹಾಸ ಇದೆ. ಅವರ ಸಂಸ್ಕೃತಿ ಭಾರತದಾದ್ಯಂತ ಇದೆ. ವಿಂದ್ಯಾಗಿರಿ ಮತ್ತು ಚಂದ್ರಗಿರಿ ಎರಡು ಇದೆ. ಚಾವುಂಡರಾಯ ಮೊದಲಿಗೆ ಈ ಮಸ್ತಾಕಾಭಿಷೇಕ ಶುರು ಮಾಡಿದ್ದರು. ಆರತಿ ಪುರದಲ್ಲಿ ಮತ್ತೊಂದು ಜೈನ ಬಸದಿಯಿದ್ದು,  ಅಲ್ಲಿಯೂ  ಕಾರ್ಯಕ್ರಮ ಆರಂಭವಾಗಿದೆ. ಫೆ. 2018 ಕ್ಕೆ  ಕಾರ್ಯಕ್ರಮ ನಡೆಯಲಿದೆ. ಇದೀಗ ನಮ್ಮ ಕೈಯಲ್ಲಿ 365 ದಿನ ಇದೆ. ಇವತ್ತು ಶುರು ಮಾಡಿರೋ‌ ಪ್ರಾಜೆಕ್ಟ್ ನಮಗೆ ಪ್ರತಿ ದಿನವೂ ಹೊಸ ದಿನವಾಗಿ ಬೇಗನೆ ಕೆಲಸ‌ ಮುಗಿಸ ಬೇಕಿದೆ. ನಾವು ಮಾಡುತ್ತಿರುವ ಕೆಲಸದಲ್ಲಿ ಜನರಿಗೆ ಸುರಕ್ಷತೆ ಒದಗಿಸುವ  ಅವಶ್ಯಕತೆಯೂ ಇದೆ. ರಾಜ್ಯ ಸರ್ಕಾರ ಇದಕ್ಕೆ ಸಹಕಾರ ನೀಡಿದೆ. ಬೇಗನೇ ಕೆಲಸ‌ ಮುಗಿಸಲು  ಪ್ರೋತ್ಸಾಹ ನೀಡಿದ್ದಾರೆ. ನಮಗೆ ಶಾರ್ಟ್ ಫಿಲಂ ಮಾಡಿ ಈ‌ ಕುರಿತು ಜನರಿಗೆ ತೋರಿಸಲು ಸ್ವಾಮೀಜಿಯವರ ಸಹಕಾರ ಹೆಚ್ಚಾಗಿದೆ ಎಂದರು.

ಕಾಮಗಾರಿ ಇಂತಿವೆ.

42 ಲಕ್ಷ  ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಶೌಚಾಲಯ, 400 ನೂತನ ಮೆಟ್ಟಿಲು ಸೇರಿದಂತೆ ಬಾಹುಬಲಿ ಮೂರ್ತಿಯ ಸುತ್ತಮುತ್ತಲಿನ ಟೈಲ್ಸ್ ಕಾಮಗಾರಿ. ಇತರೆ ಮೂಲಭೂತ ಸೌಕರ್ಯಗಳನ್ನು ಮಾಡಲಾಗುತ್ತಿದೆ. ಸುರಕ್ಷತೆ ಸಲುವಾಗಿ ಸುತ್ತಲ್ಲೂ ತಂತಿ ಬೇಲಿ ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಹೋಂ ಗಾರ್ಡ್ಸ್ ಹಾಗೂ ಖಾಸಗಿ ಸೆಕ್ಯುರಿಟಿ ಗಾರ್ಡ್ ಗಳನ್ನ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಎಂದಿನಂತೆ ಬಾಹುಬಲಿಯ ದರ್ಶನ ಇರಲಿದೆ ಎಂದರು.

Leave a Reply

comments

Related Articles

error: