ಪ್ರಮುಖ ಸುದ್ದಿಮೈಸೂರು

ಸಚಿವ ಸ್ಥಾನ ಆಕಾಂಕ್ಷಿಯಾದ ಹೆಚ್. ವಿಶ್ವನಾಥ್ ರಿಂದ ರಾಜೀನಾಮೆ ಪ್ರಹಸನ : ಕಾಂಗ್ರೆಸ್ ಆರೋಪ

ಮೈಸೂರು. ಜೂ. 6 : ಸಚಿವ ಸ್ಥಾನ ‌ಆಕಾಂಕ್ಷಿಯಾಗಿರುವ ಹೆಚ್ ವಿಶ್ವನಾಥ ಅವರು ಪಕ್ಷದ ವರಿಷ್ಠರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ನಾಟಕವಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿ ಆರೋಪಿಸಿತು.

ಸಮಿತಿ ಅಧ್ಯಕ್ಷ ಎಸ್ ರಾಜೇಶ್ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಚಿವ ಸ್ಥಾನ ಸಿಗಲಿಲ್ಲವೆಂದು ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರ ವಿರುದ್ಧ ಅನಾವಶ್ಯಕ ಆರೋಪ ಮಾಡುವುದನ್ನು ಪಕ್ಷವು ಸಹಿಸುವುದಿಲ್ಲ.  ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು ಸಹ ಮೈತ್ರಿ ಸರ್ಕಾರದ ಧರ್ಮಪಾಲನೆ ಮಾಡಿಲ್ಲ. ಆದ್ದರಿಂದ ಕೊಡಗು-ಮೈಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ ಸೋಲಿಗೆ ಕಾರಣವಾಗಿದ್ದರೆ ಎಂದು ಆರೋಪಿಸಿದರು.

ತುಮಕೂರಿನಲ್ಲಿ ಮಾಜಿ‌ ಪ್ರಧಾನಿ ದೇವೇಗೌಡರ ಸೋಲಿಗೆ ಕಾಂಗ್ರೆಸ್ ಕಾರಣವೆಂಬುದನ್ನು ಅಲ್ಲಗೆಳೆದ ಅವರು. ರಾಜ್ಯಾಧ್ಯಕ್ಷರಾಗಿರುವ ತಾವೇ ಮೈತ್ರಿ ಅಭ್ಯರ್ಥಿ ಪರ ಎಲ್ಲಿಯೂ ಮತ ಯಾಚಿಸಿಲ್ಲ. ಅಲ್ಲದೇ ಸಂಸದ ಶ್ರೀನಿವಾಸ ಪ್ರಸಾದ್ ರೊಂದಿಗೂ ಒಳ‌ಒಪ್ಪಂದ ಮಾಡಿಕೊಂಡಿದ್ದರು,  ಹೀಗಿದ್ದು ಕಾಂಗ್ರೆಸ್ ಬಗ್ಗೆ‌‌ ಮಾತನಾಡುವ ನೈತಿಕತೆಯಿಲ್ಲ.  ಮೈತ್ರಿ ಧರ್ಮ ಪಾಲಿಸದ ವಿಶ್ವನಾಥ ಸಮನ್ವಯ ಸಮಿತಿಯಲ್ಲಿ ಸ್ಥಾನ ಬಯಸುವುದು ಖಂಡನೀಯ, ಅವರು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು ಇಲ್ಲವಾದರೆ ಪ್ರತಿಭಟನೆ ನಡೆಸುವ ಅನಿವಾರ್ಯತೆಯನ್ನು ಅವರೇ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ನ ಅಂಕಯ್ಯ, ಗಂಗಣ್ಣ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: