ಪ್ರಮುಖ ಸುದ್ದಿಮೈಸೂರು

ಜೂ.8ರಂದು ಡಾ.ರಾಜ್ ಕುಮಾರ್ ಅವರ ‘ರಾಜ್ ಸಂಭ್ರಮ’ ರಸಮಂಜರಿ ಸಂಜೆ

ಮೈಸೂರು, ಜೂ.6 : ಡಾ.ರಾಜ್ ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಡಾ.ರಾಜ್ ಕುಮಾರ್ 90ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ‘ ರಾಜ್ ಸಂಭ್ರಮ’ ಕನ್ನಡ ಹಬ್ಬ ಎಂಬ ಶೀರ್ಷಿಕೆಯಡಿ ಸಂಗೀತ ಸಂಜೆಯನ್ನು ಜೂ.8 ರಂದು ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಚಾರಕ ಮೈಕ್ ಚಂದ್ರು ತಿಳಿಸಿದರು.

ಗುರುವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಅಂದು ಸಂಜೆ 5.30 ಕ್ಕೆ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ನಟ ಶ್ರೀನಾಥ್, ನಿರ್ಮಾಪಕ ಎಸ್.ಎ.ಗೋವಿಂದರಾಜ್, ಲಕ್ಷ್ಮಿ ಗೋವಿಂದ ರಾಜ್ ಹಾಗೂ ಎಸ್. ಎ.ಶ್ರೀನಿವಾಸ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಇಎಸ್ ಎಸ್ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀವತ್ಸ ವಹಿಸಲಿದ್ದಾರೆ.

ಡಾ.ರಾಜ್ ಕುಮಾರ್ ನಟಿಸಿದ ಚಿತ್ರದ ಗೀತೆಗಳನ್ನು ಜಯರಾಂ,ಡಾ.ಎಂ.ಎಸ್.ನಟಶೇಖರ್, ಬಾಲರಾಜ್. ವೀಣಾ ಪಂಡಿತ್, ಸರ್ವ ಮಂಗಳ,ರಮ್ಯಶ್ರೀ,ನಿಸರ್ಗ, ಪ್ರಕೃತಿ,  ಡಾ.ರಾಜ್ ಗಾಯನ ಸ್ಪರ್ಧೆಯ ವಿಜೇತರಾದ  ರವಿಕುಮಾರ್, ಚರಣ್, ಲಕ್ಕಯ್ಯ, ರಾಮ್ ಪ್ರಸಾದ್‌, ಡಿಂಪಲ್, ಋಷಿಕೇಶ್, ಸಂಜಯ್ 30 ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಇದೇ ಸಂದರ್ಭ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಡಾ.ರಾಜ್ ಕುಮಾರ್ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ೬ ಜನ  ಅಭಿಮಾನಿಗಳಿಗೆ ಸನ್ಮಾನಿಸಲಾಗುತ್ತದೆ.  ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಗಾಯಕ ಜಯರಾಂ, ಅಭಿಮಾನಿ ಮಲ್ಲೇಶ್ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: