ಮೈಸೂರು

‘ಮುತ್ತಮ್ಮನ ಕನಸು’ ಚಿತ್ರತಂಡಕ್ಕೆ ಶುಭ ಕೋರಿದ ಕನ್ನಡ ಕ್ರಾಂತಿ ದಳ

ಮೈಸೂರು,ಜೂ.6:- ಭಯಾನಕ ನಾಗ   ನಿರ್ಮಿಸಿ ನಿರ್ದೇಶಿಸುತ್ತಿರುವ ನೂತನ ಚಿತ್ರ  ‘ಮುತ್ತಮ್ಮನ ಕನಸು’ ಮುಹೂರ್ತದ ಸಂದರ್ಭ ಕನ್ನಡ ಕ್ರಾಂತಿ ದಳದ ವತಿಯಿಂದ ಚಿತ್ರ ತಂಡಕ್ಕೆ ಶುಭಾ ಕೋರಲಾಯಿತು.

ನಿರ್ದೇಶಕರಾದ ಭಯಾನಕ ನಾಗ   ಮಾತನಾಡಿ ‘ಮುತ್ತಮ್ಮನ ಕನಸು’ ಒಂದು ವಿಭಿನ್ನ ಕಥಾ ಹಂದರವುಳ್ಳ ಮಕ್ಕಳ  ಚಿತ್ರವಾಗಿದ್ದು, ಡ್ರಾಮಾ ಜೂನಿಯರ್ ಖ್ಯಾತಿಯ ಮಕ್ಕಳು ನಟಿಸುತ್ತಿದ್ದಾರೆ. ಅಲ್ಲದೇ  ಸ್ವಚ್ಛ ಭಾರತದ ಕಥೆ ಹೊಂದಿದ್ದು ಮೈಸೂರಿನ 65 ನಗರ ಪಾಲಿಕೆ ಸದಸ್ಯರುಗಳು ಒಂದು ಹಾಡಿನಲ್ಲಿ ಬಂದು ನಟನೆ ಮಾಡುತ್ತಿರುವುದು ಈ ಚಿತ್ರದ ವಿಶೇಷ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಕ್ರಾಂತಿದಳದ ಯುವ ಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್, ಧನಂಜಯ  ಚಿತ್ರದಲ್ಲಿ ನಟಿಸುತ್ತಿರುವ ಮಕ್ಕಳುಗಳು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: