ಪ್ರಮುಖ ಸುದ್ದಿ

ಕಡಗದಾಳು ಶಾಲೆಗೆ ಜಿ.ಪಂ. ಸಿಇಒ ದಿಢೀರ್ ಭೇಟಿ : ಬಾಲಕನನ್ನು ಮರಳಿ ಶಾಲೆಗೆ ಕರೆ ತಂದ ಲಕ್ಷ್ಮೀಪ್ರಿಯ

ರಾಜ್ಯ(ಮಡಿಕೇರಿ) ಜೂ.7 :-ಶಿಕ್ಷಣ ಇಲಾಖೆಯು ಮೇ, 20 ರಿಂದ 31 ರವರೆಗೆ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೇ, 30 ರಂದು ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಮತ್ತು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ಅವರು ಕಡಗದಾಳು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಸರ್ಕಾರಿ ಪ್ರಾಥಮಿಕ ಶಾಲೆ ಕಡಗದಾಳು ಇಲ್ಲಿಗೆ ದಿಢೀರ್ ಭೇಟಿ ನೀಡಿದರು. ಈ ಶಾಲೆಯಿಂದ ಹೊರಗುಳಿದ ಅಣ್ಣಯ್ಯ ಆರ್. ಎಂಬ ಬಾಲಕನ ಮನೆಗೆ ಇತರೆ ಅಧಿಕಾರಿಗಳೊಂದಿಗೆ ಸ್ವತಃ ಭೇಟಿ ನೀಡಿದ ಲಕ್ಷ್ಮೀಪ್ರಿಯ ಪೋಷಕರ ಹಾಗೂ ಬಾಲಕನ ಮನವೊಲಿಸಿ, ಮರಳಿ ಶಾಲೆಗೆ ಕರೆತಂದರು.
ನಂತರ ಮಗುವನ್ನು ವಯೋಮಾನದ ಆಧಾರದ ಮೇಲೆ ಕಡಗದಾಳು ಸರ್ಕಾರಿ ಪ್ರೌಢಶಾಲೆಗೆ 8ನೇ ತರಗತಿಗೆ ದಾಖಲಿಸಲಾಯಿತು. ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಮಗುವಿನ ಪೋಷಕರಾದ ಕೆಚ್ಚೆಟ್ಟಿರ ಶಂಭು ಮಗುವನ್ನು ತಕ್ಷಣವೇ ದಾಖಲಿಸಿ, ನಿಯಮಿತವಾಗಿ ಶಾಲೆಗೆ ಕಳುಹಿಸುತ್ತೇನೆಂದು ಭರವಸೆ ನೀಡಿದರು.
ಕಡಗದಾಳು ಪಂಚಾಯತ್ ಉಪಾಧ್ಯಕ್ಷರಾದ ಮಾದೇಟ್ಟಿರ ತಿಮ್ಮಯ್ಯ, ಕಡಗದಾಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಿಕಾ ಬಿ.ಡಿ., ಕಡಗದಾಳು ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾದ ನೀಲಮ್ಮ ಎನ್.ಯು., ಸಿ.ಆರ್.ಪಿ. ಸೌಮ್ಯಶೆಟ್ಟಿ ಬಿ.ಬಿ. ಮತ್ತು ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿಗಳು ಅಧಿಕಾರಿಗಳೊಂದಿಗೆ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: