ಪ್ರಮುಖ ಸುದ್ದಿಮೈಸೂರು

ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮೀನಾಕ್ಷಿ ಮಹದೇವಸ್ವಾಮಿ

ಆಸ್ಪತ್ರೆಯಿಂದ ಕುಟುಂಬ ವರ್ಗದವರಿಗೆ ಕೃತಜ್ಞತೆ

ಮೈಸೂರು,ಜೂ.7 : ತಟ್ಟಿದರೆ ಬೆರಣಿಯಾದೆ, ಇಟ್ಟರೆ ನೊಸಲಿಗೆ ವಿಭೂತಿಯಾದೆ, ನೀನ್ಯಾರಿಗಾದೆಯೋ ಎಲೆ ಮಾನವ ಎಂಬ ಸಾಲುಗಳಿಗೆ ಮನುಷ್ಯನೂ ಸಾರ್ಥಕ ಜೀವಿ ಎಂಬ ನೂತನ ಭಾವಾರ್ಥ ಕಲ್ಪಿಸಿದ್ದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮೀನಾಕ್ಷಿ ಮಹದೇವಸ್ವಾಮಿ ಹಾಗೂ ಅವರ ಕುಟುಂಬ ವರ್ಗ.

ಈ ಬಗ್ಗೆ ಅಪೋಲೋ ಬಿಜಿಎಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ದಕ್ಷ ಬೆಟಸೂರಮಠ್ ಪತ್ರಿಕಾ ಹೇಳಿಕೆ ನೀಡಿ,  ಪಾಲಿಕೆ ಮಾಜಿ ಸದಸ್ಯೆ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಮೀನಾಕ್ಷಿಯವರು ಮೇ.31ರಂದು ರಾತ್ರಿ ಸುಮಾರು 10 ಗಂಟೆಗೆ ಗಂಭೀರ ಸ್ಥಿತಿಯಲ್ಲಿ  ಆಸ್ಪತ್ರೆಗೆ ದಾಖಲಾದರು, ಹಲವು ಪರೀಕ್ಷೆಗಳಿಗೊಳಪಡಿಸಿದಾಗ ಅವರ ಮೆದುಳು ನಿಷ್ಕ್ರಿಯವಾಗಿರುವ ಬಗ್ಗೆ ಬಂದ ವರದಿಯಾಧರಿಸಿ ಅವರ ಅಂಗಾಗಳನ್ನು ದಾನ ಮಾಡುವ ನಿರ್ದಾರವನ್ನು ಕುಟುಂಬ ಕೈಗೊಂಡಿತು.

ಇದರಿಂದ ಅವರ ಲಿವರ್, ಕಾರ್ನಿಯಾ ಮುಂತಾದ ಅಂಗಾಂಗಳನ್ನು ತೆಗೆಯಲಾಯಿತು, ಅವರ ಲಿವರ್ ಅನ್ನು ತಿಂಗಳ ಕಾಲದಿಂದಲೂ ಅನಾಆರೋಗ್ಯ  ಬಳಲುತ್ತಿದ್ದ ರೋಗಿಗೆ ಬಳಸುವ ಮೂಲಕ ಇನ್ನೊಂದು ಜೀವಕ್ಕೆ ಸಂಜೀವಿನಿಯಾಗಿ ಅಂತಿಮ ಕ್ಷಣದಲ್ಲಿಯೂ ಆದರ್ಶ ಪ್ರಾಯರಾಗಿದ್ದಾರೆ. ಕುಟುಂಬದ ನಿರ್ಧಾರದ ಬಗ್ಗೆ ಆಸ್ಪತ್ರೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆಯನ್ನು ಆಸ್ಪತ್ರೆ ಉಪಾಧ್ಯಕ್ಷರಾದ ಎನ್. ಜಿ. ಭರತೀಶ ರೆಡ್ಡಿ  ತಿಳಿಸಿದ್ದಾರೆ.

ಮನುಷ್ಯನೇ ಮನುಷ್ಯನನ್ನು ಬದುಕಿಸುವ ಮೂಲಕ ಮನುಷ್ಯನೂ ಸಾರ್ಥಕ ಜೀವಿ ಎಂಬುದನ್ನು ಕುಟುಂಬ ವರ್ಗ ದೃಢಪಡಿಸಿರುವ ಬಗ್ಗೆ ಆಸ್ಪತ್ರೆಯು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂಗಾಂಗಳ ಕಸಿ ವಿಧಾನದಿಂದ ನಿರುಪಯುಕ್ತನಾದ ಮನುಷ್ಯ ಜೀವಿಯೂ ಹಲವು ಜೀವಗಳಿಗೆ ವರದಾನವಾಗಬಲ್ಲ ಎಂಬುದನು ಮಹಾನಗರ ಪಾಲಿಕೆ ಸದಸ್ಯೆ ಮೀನಾಕ್ಷಿಯವರು ನಿರೂಪಿಸಿದ್ದಾರೆ ಎಂದು ಆಸ್ಪತ್ರೆ ತಿಳಿಸಿದ್ದಾರೆ. (ವರದಿ : ಕೆ.ಎಂ.ಆರ್)

Leave a Reply

comments

Related Articles

error: