ಮೈಸೂರು

ಲಿಂಗಾಭುದಿ ಕೆರೆಯ ಬಳಿ ಚಿರತೆ ಪ್ರತ್ಯಕ್ಷ

ಮೈಸೂರಿನ ದಟ್ಟಗಳ್ಳಿ ಬಳಿ ಇರುವ ಲಿಂಗಾಂಭುದಿ ಕೆರೆಯ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಲಿಂಗಾಭುದಿ ಕೆರೆಯ ಬಳಿ ಬುಧವಾರ ಹಸುವಿನ ಅರ್ಧ ತಿಂದ ದೇಹ ಪತ್ತೆಯಾಗಿತ್ತು. ಸ್ಥಳೀಯರಿಗೆ ಇದೇನಾಗಿರಬಹುದು ಎನ್ನುವ ಆತಂಕ ಕಾಡಿತ್ತು. ಗುರುವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದವರಿಗೆ ಕೆರೆಯಲ್ಲಿ ಚಿರತೆಯೊಂದು ತನ್ನ ಮೂರು ಮರಿಗಲೊಂದಿಗೆ ನೀರು ಕುಡಿಯುತ್ತಿರುವುದು ಕಂಡು ಬಂದಿದ್ದು, ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯ ಸೆರೆಗೆ ಬೋನಿರಿಸಿದ್ದಾರೆ.

ಚಿರತೆಯ ಸೆರೆಗಾಗಿ ಅರಣ್ಯಾಧಿಕಾರಿಗಳು ಕಣ್ಣಿರಿಸಿದ್ದು, ಚಿರತೆಯನ್ನು ಬೋನಿಗೆ ಕೆಡಹುವ ಕುರಿತು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: