ಪ್ರಮುಖ ಸುದ್ದಿ

ಬಂಡೀಪುರ, ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದಲ್ಲಿ ಬಿತ್ತನೆ ಕಾರ್ಯಕ್ಕೆ ಚಾಲನೆ

ರಾಜ್ಯ(ಚಾಮರಾಜನಗರ)ಜೂ.7:- ಬಂಡೀಪುರ, ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದಲ್ಲಿ ಬಿತ್ತನೆ ಕಾರ್ಯಕ್ಕೆ ಇಂದು ಚಾಲನೆ ದೊರೆಯಿತು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದ ಸುಮಾರು 5 ಎಕರೆ ಪ್ರದೇಶದಲ್ಲಿ ಪ್ರಾರಂಭಿಕವಾಗಿ ಬೀಜ ನೆಡುವ ಕೆಲಸ ಪ್ರಾರಂಭವಾಯಿತು. ಈ ವೇಳೆ ನ್ಯಾಯಧೀಶರಾದ ನಾಗರಾಜಬಾರ್ಕಿ ಹಾಗೂ ಹೆಚ್.ಪಿ.ಮೋಹನಕುಮಾರ್ ಪಾರ್ಥೇನಿಯಂ ಗಿಡಗಳನ್ನು ತೆರವುಗೊಳಿಸಿದರು. ನಂತರ ಬೀಜ ತುಂಬಿದ ಬ್ಯಾಗನ್ನು ಹೆಗಲಿಗೆ ಏರಿಸಿಕೊಂಡು ಬೆಂಕಿ ಬಿದ್ದ ಸ್ಥಳದಲ್ಲಿ ಚೆಲ್ಲಿದರು.

ಈ ಸಂದರ್ಭ ಮಾತನಾಡಿದ ನ್ಯಾಯಾಧೀಶರು ಇತ್ತೀಚಿಗೆ ಬಂಡೀಪುರ ಅಭಯಾರಣ್ಯದ ಕುಂದಕೆರೆ ಹಾಗೂ ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯಕ್ಕೆ ಕಿಡಿಗೇಡಿಗಳಿಂದ ಬೆಂಕಿ ತಗುಲಿ ಅಪಾರ ಪ್ರಮಾಣದ ಅರಣ್ಯ ನಾಶವಾಗಿತ್ತು. ಅರಣ್ಯಕ್ಕೆ ಯಾರೂ ಕೂಡ ಬೆಂಕಿ ಹಚ್ಚುವ ಕೆಟ್ಟ ಕೆಲಸ ಮಾಡಬಾರದು ಎಂದು ಕಿವಿ ಮಾತು ಹೇಳಿದರು.

ಈ ವೇಳೆ ಸಿ.ಎಫ್. ಬಾಲಚಂದ್ರ, ಎಸಿಎಫ್ ರವಿಕುಮಾರ್ ಆರ್.ಎಫ.ಓ. ಶ್ರೀನಿವಾಸ ಸೇರಿದಂತೆ ಸಿಬ್ಬಂದಿಗಳು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: