ಪ್ರಮುಖ ಸುದ್ದಿ

ಸುಗಮ ಕಾರ್ಯಕಲಾಪಕ್ಕೆ ಸಹಕಾರ ಕೋರುವ ನಿಟ್ಟಿನಲ್ಲಿ ಸೋನಿಯಾ ಗಾಂಧಿ ಭೇಟಿ ಮಾಡಿದ ಬಿಜೆಪಿ ನಾಯಕರು

ದೇಶ(ನವದೆಹಲಿ)ಜೂ.7:- ಸಂಸತ್ ಅಧಿವೇಶನ ಜೂ.17ರಿಂದ ಆರಂಭವಾಗಲಿದ್ದು, ಸುಗಮ ಕಾರ್ಯಕಲಾಪಕ್ಕೆ ಸಹಕಾರ ಕೋರುವ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಿಜೆಪಿ ನಾಯಕರಿಂದು ಭೇಟಿ ಮಾಡಿದ್ದಾರೆ.

ನವದೆಹಲಿಯಲ್ಲಿರುವ ಜನಪಥ್ 10ರ ನಿವಾಸದಲ್ಲಿ ಸೋನಿಯಾಗಾಂಧಿಯವರನ್ನು  ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯ ಸಚಿವ ಅರ್ಜುನ್  ರಾಮ್ ಮೇಘ್ ವಾಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭೇಟಿ ಮಾಡಿದರು.

ಸೋನಿಯಾ ಗಾಂಧಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತೋಮರ್ ಸಂಸತ್ತಿನಲ್ಲಿ ಸುಗಮ ಕಾರ್ಯಕಲಾಪ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸಹಕಾರಕ್ಕಾಗಿ ಎಲ್ಲಾ ನಾಯಕರೊಂದಿಗೆ ಸಭೆ ನಡೆಸಲಾಗುವುದೆಂದು ತಿಳಿಸಿದರು. ಸಂಸತ್ ನ ಪ್ರಥಮ ಅಧಿವೇಶನ  ಜುಲೈ26ರವರೆಗೆ ನಡೆಯಲಿದೆ. ಜು.5ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ.   (ಎಸ್.ಎಚ್)

Leave a Reply

comments

Related Articles

error: