ಮನರಂಜನೆಮೈಸೂರು

ಬರಿಗಾಲಿನಲ್ಲಿ ಮೆಟ್ಟಿಲು ಮೂಲಕ ತೆರಳಿ ಚಾಮುಂಡಿ ದರ್ಶನ ಪಡೆದ ಪುನೀತ್

ಮೈಸೂರು,ಜೂ.8:- ಇಂದು‌ ಚಾಮುಂಡಿ ಬೆಟ್ಟಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿ ನೀಡಿದರು. ಬೆಟ್ಟದ ಮೆಟ್ಟಲುಗಳ ಮೂಲಕ‌  ಬರಿ ಕಾಲಿನಲ್ಲಿಯೇ ತೆರಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಪ್ರತಿ ಬಾರಿಯೂ ಇದೇ ರೀತಿ‌ ತಾಯಿಯ ದರ್ಶನ‌ ಪಡೆಯಲಿರುವ ಪುನೀತ್ ರಾಜಕುಮಾರ್ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಪುನೀತ್ ರಾಜಕುಮಾರ್ ಗೆ ಅಭಿಮಾನಿಗಳು‌ ಸಾಥ್ ನೀಡಿದರು. (ಕೆ.ಎಸ್, ಎಸ್.ಎಚ್)

Leave a Reply

comments

Related Articles

error: