ಮೈಸೂರು

ರೆಸಾರ್ಟ್ ನಿರ್ಮಾಣಕ್ಕಾಗಿ ಕೊಡಗಿನಲ್ಲಿ ಮರಗಳ ಮಾರಣಹೋಮ : ಪ್ರತಿಭಟನೆ

ಮೈಸೂರು,ಜೂ.8 :  ಪ್ರವಾಸಿಗರ ನೆಚ್ಚಿನ ತಾಣ ಕೊಡಗಿನಲ್ಲಿ ರೆಸಾರ್ಟ್ ನಿರ್ಮಾಣಕ್ಕಾಗಿ  ಬರೋಬ್ಬರಿ 800 ಮರಗಳ ಮಾರಣ ಹೋಮ ಮಾಡಲಾಗಿದ್ದು ಇದನ್ನು ಖಂಡಿಸಿ ಗಂಧದಗುಡಿ ಫೌಂಡೇಷನ್ ಕರ್ನಾಟಕ ಪ್ರತಿಭಟನೆಗೆ ಮುಂದಾಗಿದೆ.

ಕೊಡಗಿನಲ್ಲಿ ಪ್ರಕೃತಿಯೊಂದಿಗೆ ಮಾನವನಾಡುವ ಆಟದಿಂದಾಗಿ ಹಲವಾರು ಅವಘಡಗಳು, ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ, ಇಂತಹ ಸಮಯದಲ್ಲಿ ಪ್ರಕೃತಿಯ ಸಂರಕ್ಷಿಸುವುದನ್ನು ಬಿಟ್ಟು ಇನ್ನಷ್ಟು ನಾಶಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ  ಆಂಧ್ರ ಮೂಲದ ಉದ್ಯಮಿಯೊಬ್ಬರು ರೆಸಾರ್ಟ್ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿದಿರುವುದುನ್ನು ವಿರೋಧಿಸಿ ಜೂ.10ರಂದು ಬೆಳಗ್ಗೆ 11.30 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಂಸ್ಥೆಯ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: