ಸುದ್ದಿ ಸಂಕ್ಷಿಪ್ತ

ಜೂ.10 ರಿಂದ ಐದು ದಿನಗಳ ಕಾರ್ಯಕ್ರಮ

ಮೈಸೂರು,ಜೂ.8 : ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಹಾಗೂ ಸಂಶೋಧನಾ ಫೌಂಡೇಷನ್ ಜಂಟಿಯಾಗಿ ಐದು ದಿನಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜೂ.10ರಂದ ಬೆಳಗ್ಗೆ 9.30ಕ್ಕೆ  ಶ್ರೀರಾಮಕೃಷ್ಣಾಶ್ರಮದ ಡಾ.ಶ್ರೀ ಶಾಂತಿವಾರ್ಥನಂದ ಸ್ವಾಮೀಜಿ ಉದ್ಘಾಟಿಸುವರು.ಯುಜಿಸಿ ನಿರ್ದೇಶಕಿ ಡಾ.ಮಿಡ್ತಲ್ ರಾಣಿ ಮುಖ್ಯ ಅತಿಥಿಯಾಗಿರುವರು, ಸಂಸ್ಥೆಯ ಗೌರವಾಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಸಿಎಂಸಿ ಅಧ್ಯಕ್ಷ ಟಿ.ನಾಗರಾಜು ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: