Uncategorized

ಹಾಡು ಹಗಲೇ ಹುಲಿ ದಾಳಿಗೆ ಮೇಕೆ ಬಲಿ

ಮೈಸೂರು,ಜೂ.10:- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವನದಂಚಿನಲ್ಲಿ ಹಾಡುಹಗಲೇ ಹುಲಿಯೊಂದರ ದಾಳಿಗೆ ಮೇಕೆ ಬಲಿಯಾದ ಘಟನೆ ನಡೆದಿದೆ.

ಕೆ.ಜಿ‌. ಹೆಬ್ಬನಕುಪ್ಪೆ  ತರಗನ್ ತೆಂಗಿನ ತೋಟದಲ್ಲಿ ಹಾಡು ಹಗಲೇ ಮೇಕೆ ಮೇಲೆ ದಾಳಿ ನಡೆಸಿದ್ದು, ಬಿಲ್ಲೇನ ಹೊಸಹಳ್ಳಿ ಗ್ರಾಮದ ಉದಯನ್ ಅವರಿಗೆ ಸೇರಿದ ಮೇಕೆ ಸಾವನ್ನಪ್ಪಿದೆ. ತೋಟದಿಂದ ಮನೆ ಕಡೆಗೆ ಮೇಕೆಗಳು ಹೊರಟಾಗ ಒಮ್ಮೆಲೆ ಹುಲಿ ದಾಳಿ ನಡೆಸಿದೆ. ಹುಲಿ ಕಂಡು ಮೇಕೆ ಮೇಯಿಸುವಾತ ಹಾಗೂ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಕೂಗಾಟ ಹಾಗೂ ಕಿರುಚಾಟದಿಂದ ಗಾಬರಿಗೊಂಡ ಹುಲಿ ಮೇಕೆ ಅಲ್ಲೇ ಬಿಟ್ಟು ಪಕ್ಕದಲ್ಲಿದ್ದ ಶೆಟ್ಟಹಳ್ಳಿ ಪ್ರಾದೇಶಿಕ ಅರಣ್ಯ ಪ್ರದೇಶದೊಳಗೆ ನುಗ್ಗಿದೆ. ಘಟನಾ ಸ್ಥಳಕ್ಕೆ ಕಚುವಿನಹಳ್ಳಿ ಶ್ರೇಣಿಯ ಡಿ ಆರ್ ಎಫ್ ಒ ವೀರಭದ್ರ ಹಾಗೂ ಸಿಬ್ಬಂದಿ ವರ್ಗ ಭೇಟಿ ನೀಡಿ ಸ್ಥಳ  ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ ಹುಲಿ ಸೆರೆಗೆ ಬೋನ್ ಇಡಲಾಗುವುದೆಂದು ಹುಣಸೂರು  ಆರ್ ಎಪ್ ಒ ಸುರೇಂದ್ರ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: