ಪ್ರಮುಖ ಸುದ್ದಿ

ಕೃಷ್ಣರಾಜಪೇಟೆ ಪಟ್ಟಣದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೇರ ಬಸ್ ಸಂಚಾರ

ರಾಜ್ಯ(ಮಂಡ್ಯ) ಜೂ.10 :- ಕೃಷ್ಣರಾಜಪೇಟೆ ಪಟ್ಟಣದಿಂದ ದಕ್ಷಿಣ ಕನ್ನಡದ ಧಾರ್ಮೀಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೇರ ಬಸ್ ಸಂಚಾರ ಆರಂಭಿಸಲಾಗಿದೆ.

ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆನಾಡಿನ ಪ್ರಕೃತಿಯ ಸೊಬಗಿನ ಸುಬ್ರಹ್ಮಣ್ಯಕ್ಕೆ ಶಾಸಕ ನಾರಾಯಣಗೌಡರ ಮನವಿಯ ಮೇರೆಗೆ ಕೆ.ಆರ್.ಪೇಟೆ ಬಸ್ ಡಿಪೋದಿಂದ ಬಸ್ ಸಂಚಾರವನ್ನು ಆರಂಭಿಸಲಾಗಿದ್ದು ಸಾರ್ವಜನಿಕರು ಹಾಗೂ ಭಕ್ತಾದಿಗಳು ತೀವ್ರ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆ.ಆರ್.ಪೇಟೆ ಬಸ್ ನಿಲ್ದಾಣದಿಂದ ಹೊರಡುವ ಈ ಬಸ್ಸು ಸಾಲಿಗ್ರಾಮ, ರಾಮನಾಥಪುರ, ಕೊಣನೂರು, ಸೋಮವಾರಪೇಟೆ, ಶನಿವಾರಸಂತೆ, ಬಿಸ್ಲೆ ಘಾಟಿ ಮಾರ್ಗವಾಗಿ ಸುಬ್ರಮಣ್ಯ ತಲುಪಲಿದೆ. ಡಿಪೋ ವ್ಯವಸ್ಥಾಪಕ ಶಿವಕುಮಾರ್  ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರು ಈ ಬಸ್ಸಿನ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: