
ಮೈಸೂರು
ಮೈಸೂರಿನಲ್ಲಿ ಮಹಿಳೆಯರಿಗಾಗಿ ವಿಶೇಷ ಪೆಟ್ರೋಲ್ ಬಂಕ್ ನಿರ್ಮಾಣ : ಬೋಗಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಪಿಂಕ್ ಪೆಟ್ರೋಲ್ ಬಂಕ್
ಮೈಸೂರು,ಜೂ.10:- ಮೈಸೂರಿನಲ್ಲಿ ಮಹಿಳೆಯರಿಗಾಗಿ ವಿಶೇಷ ಪೆಟ್ರೋಲ್ ಬಂಕ್ ನಿರ್ಮಾಣವಾಗಿದ್ದು, ಇದು ರಾಜ್ಯದಲ್ಲೇ ವಿಶೇಷವೆನ್ನಬಹುದು.
ಇಡೀ ರಾಜ್ಯ ತಿರುಗಿದರೂ ಇಂತಹ ಪೆಟ್ರೋಲ್ ಬಂಕ್ ಸಿಗಲ್ಲ. ಇದು ಮೈಸೂರಿನಲ್ಲಿರುವ ಏಕ ಮಾತ್ರ ಪೆಟ್ರೋಲ್ ಬಂಕ್ ಆಗಿದೆ. ಮೈಸೂರಿನಲ್ಲಿ ಪಿಂಕ್ ಪೆಟ್ರೋಲ್ ಬಂಕ್ ಆರಂಭವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಇರುತ್ತಿದ್ದ ಪಿಂಕ್ ಮತಗಟ್ಟೆ ರೀತಿಯಲ್ಲಿ ಪಿಂಕ್ ಪೆಟ್ರೋಲ್ ಬಂಕ್ ರೂಪುಗೊಂಡಿದೆ. ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ಈ ಪೆಟ್ರೋಲ್ ಬಂಕ್ ಇದ್ದು, ಮಹಿಳೆಯರಿಗಾಗಿ ಪಿಂಕ್ ಪೆಟ್ರೋಲ್ ಬಂಕ್ ಇದೆಯಂತೆ. ಮಹಿಳೆಯರಿಗೆ ಅನುಕೂಲ ಆಗುವ ರೀತಿಯಲ್ಲಿ ಪ್ರತ್ಯೇಕ ಪಂಪ್ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಮಹಿಳೆಯರು ಮಾತ್ರ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರ ವಾಹನಗಳಿಗೆ ಪೆಟ್ರೋಲ್ ಹಾಕಲು ಮಹಿಳಾ ಸಿಬ್ಬಂದಿಗಳೇ ಇಲ್ಲಿ ಇದ್ದಾರೆ. ಪೆಟ್ರೋಲ್ ಬಂಕ್ ಗಳಲ್ಲಿ ಮಹಿಳೆಯರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಲು ಈ ದಾರಿ ಕಂಡುಕೊಳ್ಳಲಾಗಿದೆ. ಕಳೆದ ಎರಡು ದಿನದಿಂದ ಈ ಪಿಂಕ್ ಪೆಟ್ರೋಲ್ ಬಂಕ್ ಕಾರ್ಯ ನಿರ್ವಹಿಸುತ್ತಿದ್ದು, ಕಾಲೇಜು ವಿದ್ಯಾರ್ಥಿನಿಯರು ಹಾಗೂ ಉದ್ಯೋಗದಲ್ಲಿ ಇರುವ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಪಿಂಕ್ ಪೆಟ್ರೋಲ್ ಬಂಕ್ ಸ್ಥಾಪನೆ ಮಾಡಲಾಗಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)