ದೇಶಪ್ರಮುಖ ಸುದ್ದಿ

ಜಯಲಲಿತಾ ಸಾವಿನ ತನಿಖೆಯಾಗಲಿ : ಖಾಸಗಿ ವೈದ್ಯ ಡಾ.ಎಂ.ಎನ್. ಶಂಕರ್ ಒತ್ತಾಯ

ನಾನು ವಿದೇಶದಲ್ಲಿದ್ದಾಗ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಚೆನ್ಹೈನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ನಾಟಕೀಯ ಬೆಳವಣಿಗೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಅವರ ಸಾವಿನ ಬಗ್ಗೆ ಕೂಲಂಕಷವಾಗಿ ತನಿಖೆಯಾಗಬೇಕೆಂದು ಅವರ ಖಾಸಗಿ ವೈದ್ಯ ಡಾ.ಎಂ.ಎನ್.ಶಂಕರ್ ಒತ್ತಾಯಿಸಿದ್ದು, ಜಯಲಲಿತಾ ಸಾವಿನ ನಿಗೂಢತೆ ಮತ್ತಷ್ಟು ರಾಜಕೀಯ ತಿರುವು ಪಡೆಯುವ ಸಾಧ್ಯತೆಗಳಿವೆ.

ದಿ. ಜಯಲಲಿತಾ ಅವರ ಖಾಸಗಿ ವೈದ್ಯರು ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, ಜಯಾ ಅವರ ಆಪ್ತೆ ಶಶಿಕಲಾ ಮೇಲೆ ಮತ್ತಷ್ಟು ಅನುಮಾನ, ಗೊಂದಲಗಳು ಮೂಡುವಂತೆ ಮಾಡಿವೆ.

ವೈದ್ಯರ ಈ ಹೇಳಿಕೆಯಿಂದ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ರಾಜಕೀಯವಾಗಿ ಮತ್ತಷ್ಟು ಬಲವಾಗುತ್ತಿದ್ದು ಆಪ್ತೆ ಶಶಿಕಲಾ ಮೇಲೆ ಈಗಾಗಲೇ ಅಕ್ರಮ ಆಸ್ತಿ ಪ್ರಕರಣದ ತೂಗುಗತ್ತಿ ನೇತಾಡುತ್ತಿದೆ. ಈಗ ಸಾವಿನ ತನಿಖೆಯೂ ಪ್ರಾರಂಭವಾದರೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Leave a Reply

comments

Related Articles

error: