ಮೈಸೂರು

ಇಬ್ಬರು ಇರಾನಿ ಗ್ಯಾಂಗ್ ಸರಗಳ್ಳರ ಬಂಧನ : 1,68,000ರೂ. ಮೌಲ್ಯದ 56 ಗ್ರಾಂ ತೂಕದ 02 ಚಿನ್ನದ ಸರ ವಶ

ಮೈಸೂರು,ಜೂ.11:- ಸರಗಳ್ಳತನ ಪ್ರಕರಣಗಳ ಪತ್ತೆ ಸಂಬಂಧ ಮೈಸೂರು ನಗರ ನಜರ್‍ ಬಾದ್ ಪೊಲೀಸರು 08/06/2019 ರಂದು ನಜರಬಾದ್‍ನ ಸಂದೇಶ್ ಪ್ರಿನ್ಸ್ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಒಂದು ದ್ವಿಚಕ್ರ ವಾಹನದ ಹ್ಯಾಂಡಲನ್ನು ಅಲುಗಾಡಿಸುತ್ತಾ ಬೈಕ್ ನ  ಲಾಕನ್ನು ಬಲವಂತವಾಗಿ ತೆಗೆಯಲು ಪ್ರಯತ್ನಿಸುತ್ತಿದ್ದ  ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು  ಮುಸ್ತಫಾ @ ಶಾಲು ಬಿನ್ ಮೊಹಮದ್ @ ರೈಫಲ್, (19), #ಹಿಮಾನ್ಯುಯಲ್ ನಗರ, ಟ್ಯಾಕ್ ಮೇಡು, ಸೆಲ್ವಾಪುರಂ, ಚಿಕ್ಕದಾಂ ಪಾಳ್ಯಂ, ಮೇಟುಪಾಳ್ಯಂ, ಅನ್ನೂರ್ ರಸ್ತೆ, ತಮಿಳುನಾಡು, ಅಬೂತಾಲೀಫ್ ಬಿನ್ ಜಾಕುಬಾಯ್, (20), #ಹಿಮಾನ್ಯುಯಲ್ ನಗರ್, ಟ್ಯಾಕ್ ಮೇಡು, ಸೆಲ್ವಾಪುರಂ, ಚಿಕ್ಕದಾಂ ಪಾಳ್ಯಂ, ಮೇಟುಪಾಳ್ಯಂ, ಅನ್ನೂರ್ ರಸ್ತೆ, ತಮಿಳುನಾಡು ಎಂದು ಗುರುತಿಸಲಾಗಿದೆ. ಇವರನ್ನು

ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಆರೋಪಿಗಳು ಇರಾನಿ ಗ್ಯಾಂಗ್‍ನವರಾಗಿದ್ದು, ಇವರು 2019ನೇ ಸಾಲಿನ ಮೇ ತಿಂಗಳಿನಲ್ಲಿ ಮೈಸೂರಿಗೆ ಬಂದು ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪಕ್ಕದ ಏರಿಯಾದಲ್ಲಿ ಒಂದು ಗಲ್ಲಿಯಲ್ಲಿ ನಿಲ್ಲಿಸಿದ್ದ ಒಂದು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿ, ಮೈಸೂರಿನ ನಜರ್‍ ಬಾದ್ ಮತ್ತು ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಗಳಲ್ಲಿ ಮಹಿಳೆಯರಿಂದ ಸರಗಳ್ಳತನ ಮಾಡಿ, ಅವುಗಳನ್ನು ತಮಿಳುನಾಡಿನ ಮೇಟುಪಾಳ್ಯನಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದರ ಮೇರೆಗೆ, ಇವರನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ   . 1,68,000ರೂ. ಮೌಲ್ಯದ ಒಟ್ಟು 56 ಗ್ರಾಂ ತೂಕದ 02 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ದೇವರಾಜ ವಿಭಾಗದ ಎ.ಸಿ.ಪಿ.  ಎಸ್. ಬದ್ರಿನಾಥ್‍ ಅವರ ಮಾರ್ಗದರ್ಶನದಲ್ಲಿ, ನಜರ್‍ ಬಾದ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್‍  ಮಹದೇವಸ್ವಾಮಿ.ಎಂ. ಸಿಬ್ಬಂದಿಗಳಾದ ಪ್ರಕಾಶ್, ಹಿರಣಯ್ಯ, ಉಮೇಶ್, ಮಧುಕೇಶ್, ಚೇತನ್.ಪಿ, ಶ್ರೀನಿವಾಸ್  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: