
ಪ್ರಮುಖ ಸುದ್ದಿಮೈಸೂರು
ಮೈಸೂರು ಯುವಕನನ್ನು ವರಿಸಿದ ಚೈನಾ ಯುವತಿ
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿಯೇ ಇರಲಿದೆ ಅಂತಾರೆ ಬಲ್ಲವರು. ಇದೇ ಮಾತಿಗೆ ಜೋತುಬಿದ್ದಿದ್ದರೆ ದೂರದ ಚೈನಾ ಹುಡುಗಿ ಮೈಸೂರಿನ ಹುಡುಗನನ್ನು ವರಿಸಲು ಸಾಧ್ಯವಾಗುತ್ತಿರಲಿಲ್ಲ.
ಪ್ರೀತಿ-ಪ್ರೇಮವೂ ಅದಕ್ಕೆ ಹೊರತಾಗಿಲ್ಲ. ಅದಕ್ಕೆ ದೇಶ, ಭಾಷೆ ಯಾವುದೂ ಸಂಬಂಧವಿಲ್ಲ ಎಂಬುದನ್ನು ನಿರೂಪಿಸಲೋ ಎಂಬಂತೆ ಮೈಸೂರು ನಾಯ್ಡು ನಗರದ ಯುವಕನನ್ನು ಚೈನಾ ಯುವತಿ ವರಿಸಿದ್ದಾಳೆ.
ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಪೋಷಕರ ಒಪ್ಪಿಗೆಯ ಮೇರೆಗೆ ಜೋಡಿ ಸಪ್ತಪದಿ ತುಳಿದಿದೆ. ಭಾರತದ ಡೇವಿಡ್ ಅನೋಕ್, ಚೈನಾದ ವಾಂಗ್ ಟಾಂಗ್ ಮದುವೆಯಾದ ಯುವ ಜೋಡಿಗಳಾಗಿದ್ದಾರೆ. ಮೈಸೂರಿನ ಡೇವಿಡ್ ಅನೋಕ್ ವಾಂಗ್ ಟಾಂಗ್ ಅವರನ್ನು ವರಿಸಿದ್ದಾರೆ. ಇಬ್ಬರೂ ಚೈನಾದ ಸೈಲೆಂಟ್ ಓಜಾನ್ ಶಿಪ್ಪಿಂಗ್ ಕಂಪನಿಯ ಉದ್ಯೋಗಿಗಳು.
2011ರಲ್ಲಿ ಚೈನಾ ಸೇರಿದ್ದ ಡೇವಿಡ್ ಅನೋಕ್ 2012ರಲ್ಲಿ ವಾಂಗ್ ಟಾಂಗ್ ರನ್ನು ನೋಡಿ ಅವರ ಪ್ರೀತಿಯಲ್ಲಿ ಬಿದ್ದಿದ್ದರು. ಪೋಷಕರ ಜೊತೆ ಚರ್ಚಿಸಿ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಮೈಸೂರು ಚರ್ಚ್ ನಲ್ಲಿ ವಿವಾಹವಾಗಿ, ಗ್ರ್ಯಾಂಡ್ ಮರ್ಕೂರಿ ಹೊಟೇಲ್’ನಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆದಿದೆ. ನವಜೋಡಿಗಳನ್ನು ಕಂಡು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.