ಕ್ರೀಡೆಪ್ರಮುಖ ಸುದ್ದಿ

ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ : ಭಾರತ ತಂಡಕ್ಕೆ ಭಾರೀ ಹೊಡೆತ ; ಹೆಬ್ಬೆರಳಿನ ಗಾಯದಿಂದ ಶಿಖರ್ ಧವನ್ ವಿಶ್ವಕಪ್ ನಿಂದ ಹೊರಕ್ಕೆ

ವಿದೇಶ(ಲಂಡನ್)ಜೂ.11:- ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಿಶ್ವಕಪ್ ನಿಂದ ಹೊರ ಗುಳಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪಂದ್ಯವಾಡುವ ವೇಳೆ ಶಿಖರ್ ಧವನ್ ಹೆಬ್ಬೆರಳಿಗೆ ಗಾಯವಾಗಿತ್ತು. ಮಂಗಳವಾರ ನಡೆದ ಸ್ಕ್ಯಾನ್ ಬಳಿಕ ವೈದ್ಯರು ಮೂರು ವಾರಗಳ ಕಾಲ ಮೈದಾನದಿಂದ ದೂರವುಳಿಯಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 109 ಬಾಲ್ ಗೆ 117ರನ್ ತೆಗೆಯುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ದೊರಕಿಸಿಕೊಟ್ಟಿದ್ದರು. ಫಿಲ್ಡಿಂಗ್ ಗೆ ಬಂದಿರಲಿಲ್ಲ. ಅವರ ಜಾಗದಲ್ಲಿ 50ಓವರ್ ರವೀಂದ್ರ ಜಡೇಜಾ ಫಿಲ್ಡಿಂಗ್ ಮಾಡಿದ್ದರು. ಜೂ.13ರಂದು ಭಾರತ ನ್ಯೂಜಿಲೆಂಡ್ ವಿರುದ್ಧ , ಜೂ.16ರಂದು ಪಾಕಿಸ್ತಾನ್ ವಿರುದ್ಧ ಆಡಬೇಕಿದೆ.

ಶಿಖರ್ ಧವನ್ ಜಾಗಕ್ಕೆ ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಶ್ರೇಯಸ್ ಅಯ್ಯರ್ ಗಾಗಿ ಬೇಡಿಕೆ ಇಟ್ಟಿದೆ. ಆದಾಗ್ಯೂ ರೋಹಿತ್ ಶರ್ಮಾ ಜೊತೆಗಿನ ಇನ್ನಿಂಗ್ಸ್ ಆರಂಭಕ್ಕೆ ರಿಷಬ್ ಪಂತ್ ಹೆಸರನ್ನು ಪರಿಗಣಿಸಲಾಗುತ್ತಿದೆ. ಕೆ.ಎಲ್ ರಾಹುಲ್ ಹೆಸರೂ ಕೂಡ ಇದ್ದು, ರಾಹುಲ್ ನಾಲ್ಕನೇ ಸ್ಥಾನಕ್ಕೆ ಹೊಂದಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಮೊದಲಿಗೆ ತರಲಾಗುತ್ತಿಲ್ಲ ಎನ್ನಲಾಗಿದೆ. ಇಲ್ಲಿಯವರೆಗೆ ಪ್ರಸ್ತುತ ವಿಶ್ವಕಪ್ ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು 6ವಿಕೆಟ್ ಗಳಿಂದ ಜಯಿಸಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ (122) ನಾಟ್ ಔಟ್ ಆಗಿದ್ದರು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 50ಓವರ್ ಗಳಲ್ಲಿ 352ರನ್ ಮಾಡಿ 36ರನ್ ಗಳ ಜಯ ಸಾಧಿಸಿತ್ತು. ಎರಡನೇ ಆರಂಭಿಕ ಆಟಗಾರ ಶಿಖರ್ ಧವನ್ ಶತಕ ಸಿಡಿಸಿದ್ದರು. ನಾಯಕ ವಿರಾಟ್ ಕೊಯ್ಲಿ 82 ರನ್ ಗಳಿಸಿದ್ದರು.

ಶಿಖರ್ ಧವನ್ ಜಾಗಕ್ಕೆ ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಶ್ರೇಯಸ್ ಅಯ್ಯರ್ ಗಾಗಿ ಬೇಡಿಕೆ ಇಟ್ಟಿದೆ. ಆದಾಗ್ಯೂ ರೋಹಿತ್ ಶರ್ಮಾ ಜೊತೆಗಿನ ಇನ್ನಿಂಗ್ಸ್ ಆರಂಭಕ್ಕೆ ರಿಷಬ್ ಪಂತ್ ಹೆಸರನ್ನು ಪರಿಗಣಿಸಲಾಗುತ್ತಿದೆ. ಕೆ.ಎಲ್ ರಾಹುಲ್ ಹೆಸರೂ ಕೂಡ ಇದ್ದು, ರಾಹುಲ್ ನಾಲ್ಕನೇ ಸ್ಥಾನಕ್ಕೆ ಹೊಂದಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಮೊದಲಿಗೆ ತರಲಾಗುತ್ತಿಲ್ಲ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: