ಪ್ರಮುಖ ಸುದ್ದಿ

ಬಿಜೆಪಿ ಸಂಸದ ಡಾ. ವೀರೇಂದ್ರ ಕುಮಾರ್ ಹಂಗಾಮಿ ಲೋಕಸಭಾ ಸ್ಪೀಕರ್

ದೇಶ(ನವದೆಹಲಿ)ಜೂ.12:- 17ನೇ ಲೋಕಸಭಾ ಅಧಿವೇಶನ ಜೂ.17ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ಬಿಜೆಪಿ ಸಂಸದ ಡಾ. ವೀರೇಂದ್ರ ಕುಮಾರ್ ಅವರನ್ನು ಹಂಗಾಮಿ ಸ್ಪೀಕರ್ ನ್ನಾಗಿ ನೇಮಿಸಲಾಗಿದೆ.

ವೀರೇಂದ್ರ ಕುಮಾರ್ ಅವರೇ ಸದನಕ್ಕೆ ಆಯ್ಕೆಯಾದ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಮಾಜಿ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಅವರ ಹೆಸರು ಕೇಳಿ ಬಂದಿತ್ತು. ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡ ನಂತರ ಅವರ ಹೆಸರು ಸ್ಪೀಕರ್ ಲಿಸ್ಟ್ ನಿಂದ ಹೊರಬಿತ್ತು. ಇದೀಗ ವೀರೇಂದ್ರ ಕುಮಾರ್ ಅವರು ನೇಮಕವಾಗಿದ್ದು, ಇವರು ಮಧ್ಯಪ್ರದೇಶದ ಟೀಕಮ್ ಗಢ ಸಂಸದರು. ಸ್ಪೀಕರ್ ನ್ನು ರಾಷ್ಟ್ರಪತಿಗಳು ಆಯ್ಕೆ ಮಾಡಲಿದ್ದು, ಸ್ಪೀಕರ್ ಸಂಸದರಿಗೆ ಪ್ರಮಾಣವಚನ ಬೋಧಿಸುತ್ತಾರೆ. ಇವರು 7ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಜೂ.17ರಿಂದ ಅಧಿವೇಶನ ಆರಂಭವಾಗಿ ಜು.26ರವರೆಗೆ ನಡೆಯಲಿದೆ. ಜು.5ರಂದು ಬಜೆಟ್ ಮಂಡನೆಯಾಗಲಿದೆ. (ಎಸ್.ಎಚ್)

 

 

 

Leave a Reply

comments

Related Articles

error: