ಪ್ರಮುಖ ಸುದ್ದಿ

ಪರಿಸರದ ಬಗ್ಗೆ ಯುವಶಕ್ತಿ ಕಾಳಜಿ ವಹಿಸಬೇಕು : ಸಂಸದೆ ಸುಮಲತಾ ಅಂಬರೀಶ್ ಕಿವಿಮಾತು

ರಾಜ್ಯ(ಮಂಡ್ಯ)ಜೂ.11:- ಪರಿಸರದ ಬಗ್ಗೆ ಯುವಶಕ್ತಿ ಕಾಳಜಿ ವಹಿಸಬೇಕು. ಪ್ರತಿ ವಿಚಾರದಲ್ಲೂ ತಮ್ಮ ಕರ್ತವ್ಯ ಏನೆಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಿವಿಮಾತು ಹೇಳಿದರು.

ಇಂದು ಮಂಡ್ಯ ತಾಲೂಕಿನ ಕಿಲಾರ ಗ್ರಾಮದಲ್ಲಿ ನಡೆದ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್. ಅದರಲ್ಲೂ ಸ್ವಚ್ಛತೆ, ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ತುಂಬಾ ಖುಷಿ. ರಸ್ತೆ ಚರಂಡಿ ಬಗ್ಗೆ ಮಾತನಾಡ್ತೀವಿ. ಆದ್ರೆ ಪರಿಸರ ನೀರಿನ ಬಗ್ಗೆ ಮಾತನಾಡಲ್ಲ. ಹುಟ್ಟಿದಾಗಿನಿಂದ ಸಾಯುವವರೆಗೂ ಜೀವಂತವಾಗಿ ನೋಡಿಕೊಳ್ಳೋದು ಪ್ರಕೃತಿ. ಪ್ರಕೃತಿ ಕಾಪಾಡದಿದ್ದರೇ ಮನುಕುಲ ನಾಶ ಎಂದರು.

ನಮ್ಮ ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತೆ. ಅಭಿವೃದ್ದಿಗಾಗಿ ಮರಗಿಡ ಕಡಿದರೆ ಅದರಿಂದಾಗುವ ಅನಾನುಕೂಲ ಏನೆಂಬುದನ್ನು ತಿಳಿಯಬೇಕು. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಲು ಶಿಕ್ಷಕರು ಮುಂದಾಗಬೇಕು. ಉತ್ತರ ಕರ್ನಾಟಕದಲ್ಲಿ ಒಂದು ಕೊಡ ನೀರಿಗಾಗಿ ಕಿಲೋಮೀಟರ್ ದೂರ ಹೋಗಬೇಕಿದೆ. ಇದರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕೆಲಸದಾಕೆ ಬರಲಿಲ್ಲ ಅಂತ ನಮ್ಮ‌ ಮನೆ ಕ್ಲೀನ್ ಮಾಡಿಕೊಳ್ಳುವಂತೆ ಯಾರು ಮಾಡಲಿ ಬಿಡಲಿ ನಮ್ಮ ಪರಿಸರವನ್ನು ನಾವು ಉಳಿಸಬೇಕಿದೆ. ಪ್ರತಿ ಮಾತಿನಲ್ಲೂ ಜೈ ಹಿಂದ್ ಜೈ ಕರ್ನಾಟಕ ಮಾತನ್ನು ಪ್ರತಿ ಹಂತದಲ್ಲೂ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಜೀವಂತವಾಗಿರಲು ಪ್ರಕೃತಿಯನ್ನೇ ಉಳಿಸದಿದ್ದರೇ  ಕೋಟಿಗಟ್ಟಲೇ ಆಸ್ತಿ ಏನ್ ಮಾಡುತ್ತೆ..? ಎಂದು ಪ್ರಶ್ನಿಸಿದ ಸುಮಲತಾ ಅಂಬರೀಶ್, ಪ್ರವಾಸಿ ತಾಣಗಳ ಸುತ್ತಮುತ್ತಲೂ ಪರಿಸರ ಹಾನಿಯಾಗುತ್ತಿದೆ. ಯುವ ಶಕ್ತಿ ಮುಂದೆ ಯಾವ ಸರ್ಕಾರಗಳು ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪರಿಸರದ ಬಗ್ಗೆ ಯುವಶಕ್ತಿ ಕಾಳಜಿ ವಹಿಸಬೇಕು.ಪ್ರತಿ ವಿಚಾರದಲ್ಲೂ ತಮ್ಮ ಕರ್ತವ್ಯ ಏನಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕು. ಇನ್ನು ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ನಿಮಲ್ಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು   ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: