ಕ್ರೀಡೆ

ಇಂಗ್ಲೆಂಡ್ ಗೆ ಪಂತ್ ಪ್ರಯಾಣ ಬೆಳೆಸುವುದು ಬಹುತೇಕ ಖಚಿತ

ಮುಂಬೈ,ಜೂ.11-ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ಶಿಖರ್ ಧವನ್ ಮೂರು ವಾರಗಳ ವಿಶ್ರಾಂತಿಯಲ್ಲಿರಬೇಕಾಗಿದೆ. ಇದರಿಂದ ಟೀಂ ಇಂಡಿಯಾಗೆ ಹೊಡೆತ ಬಿದ್ದಿದೆ.

ಈ ನಡುವೆ ಉದಯೋನ್ಮುಖ ಎಡಗೈ ಬ್ಯಾಟ್ಸ್ಮನ್ ರಿಷಬ್ ಪಂತ್ ಇಂಗ್ಲೆಂಡ್ ಪ್ರಯಾಣ ಬೆಳೆಸುವುದು ಬಹುತೇಕ ಖಚಿತವೆನ್ನಿಸಿದೆ. ಈ ಬಗ್ಗೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪ್ಯಾಮ್ ಕಮಿನ್ಸ್ ದಾಳಿಯಲ್ಲಿ ಬಾಲ್ ಬಡಿದು ಧವನ್ ಹೆಬ್ಬರಳಿಗೆ ಗಾಯವಾಗಿತ್ತು. ಗಾಯದ ನಡುವೆಯೂ ನೋವಿನಲ್ಲೂ ಅಮೋಘ ಇನ್ನಿಂಗ್ಸ್ ಕಟ್ಟಿದ ಧವನ್ ಅಮೋಘ ಶತಕ ಬಾರಿಸಿ ಟೀಮ್ ಇಂಡಿಯಾದ 36 ರನ್ಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು

ಮೂರು ವಾರಗಳ ಬಳಿಕ ವೈದ್ಯಕೀಯ ಪರೀಕ್ಷೆಯ ವರದಿಯ ಬಳಿಕವಷ್ಟೇ ಧವನ್ ನಾಕೌಟ್ ಪಂದ್ಯಗಳಿಗೆ ಲಭ್ಯವಾಗುವರೇ ಎಂಬುದು ತಿಳಿದು ಬರಲಿದೆ

ಇವೆಲ್ಲದರ ನಡುವೆ ಟೀಮ್ ಇಂಡಿಯಾ ವ್ಯವಸ್ಥಾಪಕ ಮಂಡಳಿಯು ರಿಷಬ್ ಪಂತ್ರನ್ನು ಇಂಗ್ಲೆಂಡ್ಗೆ ರವಾನಿಸುವಂತೆ ಬೇಡಿಕೆ ಮುಂದಿಡುವ ಸಾಧ್ಯತೆಯಿದೆ ಎಂಬುದು ತಿಳಿದು ಬಂದಿದೆ ಹಿಂದೆ 15 ಸದಸ್ಯ ಬಳಗದ ತಂಡವನ್ನು ಪ್ರಕಟಿಸಿದಾಗ ಪಂತ್ರನ್ನು ಕೈಬಿಡಲಾಗಿತ್ತು. 21 ಹರೆಯದ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಮೋಘ ನಿರ್ವಹಣೆಯನ್ನು ನೀಡಿದ್ದರು(ಎಂ.ಎನ್)

Leave a Reply

comments

Related Articles

error: