ಪ್ರಮುಖ ಸುದ್ದಿ

ಇಹಲೋಕ ತ್ಯಜಿಸಿದ ವನ್ಯಜೀವಿ ಛಾಯಾಚಿತ್ರಗ್ರಾಹಕ ಪೆರುಮಾಳ್

ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರಗ್ರಾಹಕ ಟಿ.ಎನ್.ಪೆರುಮಾಳ್ ಅವರು ಬುಧವಾರ
ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಪೆರುಮಾಳ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ಬಂಡೀಪುರ, ನಾಗರಹೊಳೆ ಹಾಗೂ ದೇಶದ
ವಿವಿಧ ವನ್ಯಜೀವಿ ಧಾಮಗಳಲ್ಲಿ ಹುಲಿಗಳ ಅಪರೂಪದ ಚಿತ್ರಗಳನ್ನು ಅವರು
ಸೆರೆಹಿಡಿದಿದ್ದರು. ಅವರ ಹಲವು ವಿಶೇಷ ವನ್ಯಜೀವಿ ಚಿತ್ರಗಳಿಗೆ ರಾಷ್ಟ್ರೀಯ ಹಾಗೂ
ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ವಯೋಸಹಜ ಖಾಯಿಲೆಗಳಿಂದ ಅವರು ಇಹಲೋಕ ತ್ಯಜಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ನಗರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ

Leave a Reply

comments

Related Articles

error: