ಸುದ್ದಿ ಸಂಕ್ಷಿಪ್ತ

ನಾಟಕೋತ್ಸವ ಮತ್ತು ಕೃತಿ ಬಿಡುಗಡೆ ಸಮಾರಂಭ ‘ಫೆ.10 ರಿಂದ 12’ರವರೆಗೆ

ನಟನ ರಂಗಶಾಲೆಯಲ್ಲಿ ಫೆ.10 ರಿಂದ 12ರವರೆಗೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ರಂಗಶಾಲೆಯಲ್ಲಿ ನಾಟಕೋತ್ಸವ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಫೆ.10ರ ಸಂಜೆ 6ಕ್ಕೆ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ರಂಗಕರ್ಮಿ ಜನ್ನಿ  ಉಪಸ್ಥಿತರಿರುವರು, ಶ್ರೀಕುಮಾರೇಶ್ವರ ಕೃಪಾ ಪೋಷಿತ ಪಂಡಿತ್ ಪಂಚಾಕ್ಷರಿ ಗವಾಯಿ ನಾಟ್ಯ ಸಂಘದಿಂದ ಶಿವಶರಣೆ ಅಕ್ಕಮಹಾದೇವಿ ನಾಟಕ ಪ್ರದರ್ಶನಗೊಳ್ಳುವುದು.

ಫೆ.11ರಂದು ಜೇವರ್ಗಿಯ ವಿಶ್ವಜ್ಯೋತಿ ಶ್ರೀಪಂಚಾಕ್ಷರಿ ನಾಟ್ಯ ಸಂಘದಿಂದ ‘ಕುಂಟ ಕೋಣ ಮೂಕ ಜಾಣ’ ನಾಟಕ

ಫೆ.12ರ ಬೆಳಿಗ್ಗೆ 10ಕ್ಕೆ ಡಾ.ವಿಜಯಾ ಅವರ ರಂಗ ಸಮ್ಮಾನ ಮತ್ತು ನುಡಿ ಬೆಳಗು ಪುಸ್ತಕಗಳ ಲೋಕಾರ್ಪಣೆಯನ್ನು ವಿಮರ್ಶಕ ಕಾಳೇಗೌಡ ನಾಗವಾರ ಬಿಡುಗಡೆಗೊಳಿಸುವರು.

ಸಂಜೆ 6ಕ್ಕೆ ಬೆಂಗಳೂರಿನ ಸ್ಪಂದನ ಅಭಿನಯಿಸುವ ಡಾ.ಬಿ.ಜಯಶ್ರೀ ನಿರ್ದೇಶನದ ಸದಾರಮೆ ನಾಟಕವಿದೆ, ಪ್ರವೇಶ ಉಚಿತ.

Leave a Reply

comments

Related Articles

error: