ಮೈಸೂರು

ಪರಿಸರ ದಿನಾಚರಣೆಯ ಗಿಡನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು : ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಜೂ.12:- ಪರಿಸರ ದಿನಾಚರಣೆಯ ಗಿಡನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ವರ್ಷದಲ್ಲಿ ಪ್ರತಿನಿತ್ಯವೂ ಪರಿಸರ ದಿನಾಚರಣೆ ನಡೆಯುತ್ತಿರಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಅವರಿಂದು ವಿಶ್ವವಿದ್ಯಾಲಯದ ಸಂಜೆ ಕಾಲೇಜಿನಲ್ಲಿ ವಿಶ್ವ ಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾದ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಗಿಡನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ವಿಶ್ವಪರಿಸರ ದಿನಾಚರಣೆ ದಿನಾಚರಣೆಯನ್ನು ಗಿಡನೆಟ್ಟು ನೀರುಣಿಸುವ  ಮೂಲಕ ಆಚರಿಸುತ್ತಿದ್ದೇವೆ.  ವಿಶ್ವಪರಿಸರ ದಿನಾಚರಣೆಯ ಗಿಡನೆಡುವ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ವರ್ಷದಲ್ಲಿ ಪ್ರತಿನಿತ್ಯವೂ ಆಗುತ್ತಿರಬೇಕು. ಗಿಡಮರಗಳಿಲ್ಲದೇ ಮಾಲಿನ್ಯ ಹೆಚ್ಚುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ನಾವು ಹಸಿರೀಕರಣ ಮೊದಲುಗೊಳಿಸಬೇಕು. ಹಸಿರೀಕರಣ ವರ್ಷದಲ್ಲಿ ಒಂದು ದಿನವಲ್ಲ. ಪ್ರತಿನಿತ್ಯ ನಡೆಯುತ್ತಿರಬೇಕು ಎಂದರು. ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನಾವು ಸಂಕಲ್ಪ ಮಾಡಿದ್ದೇವೆ. ಇನ್ನು ಒಂದು ವರ್ಷಗಳ ಕಾಲ ನಮ್ಮ ಶಾಲೆ, ಕಾಲೇಜುಗಳ ಕ್ಯಾಂಪಸ್ ಗಳೇನಿವೆ ಎಲ್ಲ ಕಡೆ ಸಾಧ್ಯವಾದಷ್ಟು ಹಸಿರೀಕರಣ ಮಾಡಿದರೆ ಮುಂದಿನ ಜನಾಂಗಕ್ಕೆ ಮನುಕುಲಕ್ಕೆ ಒಳ್ಳೆಯದಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಮಹಿಳಾ ಪೊಲೀಸ್ ತರಬೇತಿ ಶಾಲೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಪರೀಕ್ಷಾಂಗ ಕುಲಸಚಿವ ಕೆ.ಎಂ.ಮಹದೇವನ್, ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕ ಅಂಶಿಪ್ರಸನ್ನ ಕುಮಾರ್, ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನೀತ, ಮೈವಿವಿ ಕುಲಪತಿಗಳ ಆಪ್ತ ಸಹಾಯಕ ಡಾ.ಚೇತನ್, ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಆಂಜನೇಯ, ಮೈವಿವಿ ತೋಟಗಾರಿಕಾ ವಿಭಾಗದ ನಿರ್ದೇಶಕ ಮುಜಾವರ್, ವೇದಿಕೆಯ ಕಾನೂನು ಸಲಹೆಗಾರ ಉಮೇಶ್, ನಂಜನಗೂಡು ಸಹ ಪ್ರಾಧ್ಯಾಪಕ ಪ್ರೊ.ಜಗದೀಶ್, ವಿಶ್ವಮಾನವ ಮೈವಿವಿ ನೌಕರರ ವೇದಿಕೆಯ ಅಧ್ಯಕ್ಷ ಆರ್.ವಾಸುದೇವ್, ಕಾರ್ಯದರ್ಶಿ ವಿನೋದ್, ಗೌ.ಕಾರ್ಯದರ್ಶಿ ಮಹೇಶ್ ಬಾಬು ರೆಡ್ಡಿ, ಖಜಾಂಚಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: