ಮೈಸೂರು

ಅಕ್ರಮ ಕಟ್ಟಡದ ನೆಲಸಮಕ್ಕೆ ಮುಂದಾದ ಮೂಡಾ : ಹಿನಕಲ್ ನ ಹುಂಡಿ ಬೀದಿಯಲ್ಲಿ ಬೆಳ್ಳಂಬೆಳಿಗ್ಗೆ ಘರ್ಜಿಸಿದ ಜೆಸಿಬಿ

ಮೈಸೂರು,ಜೂ.12:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮ ಕಟ್ಟಡದ ನೆಲಸಮಕ್ಕೆ ಮುಂದಾಗಿದೆ. ಇಂದು ಬೆಳ್ಳಂಬೆಳಿಗ್ಗೆ ಹಿನಕಲ್ ನ ಹುಂಡಿ ಬೀದಿಯಲ್ಲಿ ಜೆಸಿಬಿ ಘರ್ಜನೆ ನಡೆಸಿದೆ.

ಹಿನಕಲ್ ನ ಹುಂಡಿ ಬೀದಿಯ ಕರಿಯಪ್ಪ ಎಂಬವರ ಮೇಲೆ  ಒತ್ತುವರಿ ಆರೋಪ ಕೇಳಿ ಬಂದಿದ್ದು, ಕಟ್ಟಡ ನೆಲಸಮಕ್ಕೆ ಮುಂದಾದ ವೇಳೆ ಸ್ಥಳದಲ್ಲಿ ಅಧಿಕಾರಿಗಳು ಹಾಗೂ ನಿವಾಸಿಗಳ ನಡುವೆ ವಾಗ್ವಾದ ನಡೆದಿದೆ. ಉದ್ದೇಶ ಪೂರ್ವಕವಾಗಿ ನಮ್ಮ ನಿವೇಶನದ ಕಟ್ಟಡ ನೆಲಸಮ ಮಾಡುತ್ತಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಮುಡಾ ಅಧಿಕಾರಿಗಳು ಕಟ್ಟಡ ನೆಲಸಮ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳು ಪೊಲೀಸರ ಸಹಾಯದಿಂದ ಕಟ್ಟಡ ತೆರವುಗೊಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: